‘ಮಗಳು ಅವಳ ತಂದೆಯ ಆಸೆ ಈಡೇರಿಸುತ್ತಿದ್ದಾಳೆ’; ರಾಧಿಕಾ ಕುಮಾರಸ್ವಾಮಿ ನೇರ ಮಾತು
ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು, ಇಲ್ಲೊಂದು ಸಿನಿಮಾದಲ್ಲಿ ಅವರು ನಟಿಸುತ್ತಾರೆ. ಸಮಯ ಸಿಕ್ಕಾಗ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ಮಗಳ ಕನಸ ಬಗ್ಗೆ ಅವರು ಮಾತನಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಅಲ್ಲೊಂದು, ಇಲ್ಲೊಂದು ಸಿನಿಮಾದಲ್ಲಿ ಅವರು ನಟಿಸುತ್ತಾರೆ. ಸಮಯ ಸಿಕ್ಕಾಗ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ಮಗಳ ಕನಸ ಬಗ್ಗೆ ಅವರು ಮಾತನಾಡಿದ್ದಾರೆ. ‘ನನ್ನದು ಸಣ್ಣ ಫ್ಯಾಮಿಲಿ. ನಾನು ಕುಟುಂಬದ ಜೊತೆ ಸಮಯ ಕಳೆಯುತ್ತೇನೆ. ನನ್ನ ತಾಯಿ, ಮಗಳು, ಅಣ್ಣನ ಜೊತೆ ಸಮಯ ಕಳೆಯಲು ಬಯಸುತ್ತೇನೆ. ಮಾಲ್ಡೀವ್ಸ್, ದೆಹಲಿ, ದುಬೈ ಟ್ರಿಪ್ ಹೋಗುತ್ತೇವೆ. ಅವಳ ಅಪ್ಪನಿಗೆ ಮಗಳನ್ನು ಟೆನ್ನಿಸ್ ಪ್ಲೇಯರ್ ಮಾಡಬೇಕು ಎನ್ನುವ ಆಸೆ ಇತ್ತು. ಅದನ್ನು ಅವಳು ಪೂರೈಸುತ್ತಿದ್ದಾಳೆ. ನಾನು ಒತ್ತಡ ಹೇರುತ್ತಿಲ್ಲ. ಇದೇ ಮಾಡು ಎಂದು ನನ್ನ ತಂದೆಯೂ ಒತ್ತಡ ಹೇರಿಲ್ಲ. ಅದೇ ರೀತಿ ನಾನು ಡಿಸೈಡ್ ಮಾಡಿದ್ದೇನೆ. ಅವರಪ್ಪನ ಕನಸನ್ನು ಪೂರೈಸುತ್ತಿದ್ದಾಳೆ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos