HMD 105: ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!

HMD 105: ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!

ಕಿರಣ್​ ಐಜಿ
|

Updated on: Jun 19, 2024 | 7:47 AM

ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಹೊಸದಾಗಿ ಎಚ್‌ಎಂಡಿ 105 ಮತ್ತು ಎಚ್‌ಎಂಡಿ 110 ಲಗ್ಗೆ ಇರಿಸಿದೆ. ನೋಕಿಯಾ ಫೋನ್ ಬಳಸಿದ ಅನುಭವವನ್ನು ಈ ಮೊಬೈಲ್​ಗಳು ನೀಡಲಿವೆ ಎಂದು ಕಂಪನಿ ಹೇಳಿದೆ. ಯುಪಿಐ ಪಾವತಿ, ಆಕರ್ಷಕ ವಿನ್ಯಾಸ ಮತ್ತು ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯ ಒದಗಿಸುವ ಗುರಿಯನ್ನು ಎಚ್​ಎಂಡಿ ಹೊಂದಿದೆ.

ಬೇಸಿಕ್ ಫೀಚರ್ ಫೋನ್​ಗಳ ಮೂಲಕ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆದಿದ್ದ ನೋಕಿಯಾ, ಈಗ ಎಚ್​ಎಂಡಿ ತೆಕ್ಕೆಗೆ ಜಾರಿದೆ. ಇನ್ನು ಮುಂದೆ ನೋಕಿಯಾ ಬ್ರ್ಯಾಂಡ್ ಬದಲಾಗಿ ಎಚ್​ಎಂಡಿ ಹೆಸರಿನಲ್ಲೇ ಹೊಸ ಮಾದರಿಯ ಮೊಬೈಲ್, ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಹೊಸದಾಗಿ ಎಚ್‌ಎಂಡಿ 105 ಮತ್ತು ಎಚ್‌ಎಂಡಿ 110 ಲಗ್ಗೆ ಇರಿಸಿದೆ. ನೋಕಿಯಾ ಫೋನ್ ಬಳಸಿದ ಅನುಭವವನ್ನು ಈ ಮೊಬೈಲ್​ಗಳು ನೀಡಲಿವೆ ಎಂದು ಕಂಪನಿ ಹೇಳಿದೆ. ಯುಪಿಐ ಪಾವತಿ, ಆಕರ್ಷಕ ವಿನ್ಯಾಸ ಮತ್ತು ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯ ಒದಗಿಸುವ ಗುರಿಯನ್ನು ಎಚ್​ಎಂಡಿ ಹೊಂದಿದೆ. ನೂತನ ಫೀಚರ್​ ಫೋನ್​ಗಳ ಕುರಿತು ವಿವರ ಇಲ್ಲಿದೆ.