ಮಾರ್ಗ ಬದಲಿಸಿದ್ದಕ್ಕೆ ಗೃಹ ಸಚಿವ ಕೆಂಡಾಮಂಡಲ: ಡಿವೈಎಸ್ಪಿ ವಿರುದ್ಧ ಪರಂ ಗರಂ ವಿಡಿಯೋ

|

Updated on: Jul 10, 2024 | 5:47 PM

ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿಗೆ ಆಗಮಿಸಿದ್ದ ವೇಳೆ ಡಿವೈಎಸ್‌ಪಿ(DYSP) ಚಂದ್ರಶೇಖರ್‌ ಮೇಲೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ (G Parameshwara) ಗರಂ ಆಗಿದ್ದಾರೆ. ‘ಕೊರಟಗೆರೆಯಿಂದ ತುಮಕೂರಿಗೆ ಬರಲು ಮಾರ್ಗ ಬದಲಿಸಿದ್ದಕ್ಕೆ ಕಿಡಿಕಾರಿದ್ದಾರೆ.

ತುಮಕೂರು, ಜು.10: ತುಮಕೂರು ನಗರ ಡಿವೈಎಸ್‌ಪಿ(DYSP) ಚಂದ್ರಶೇಖರ್‌ ಮೇಲೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ (G Parameshwara) ಗರಂ ಆಗಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿಗೆ ಆಗಮಿಸಿದ್ದ ವೇಳೆ ‘ಕೊರಟಗೆರೆಯಿಂದ ತುಮಕೂರಿಗೆ ಬರಲು ಮಾರ್ಗ ಬದಲಿಸಿದ್ದಕ್ಕೆ ಕಿಡಿಕಾರಿದ್ದಾರೆ. ಊರೆಲ್ಲ ಸುತ್ತಿಕೊಂಡು ಬರುವ ಹಾಗೆ ಮಾಡಿದ್ದು ಯಾಕೆ ಎಂದು ಸಿಟ್ಟಾಗಿದ್ದಾರೆ. ಮಧುಗಿರಿಯ ಕೊಡಿಗೆನಹಳ್ಳಿಯಲ್ಲಿ ಪೊಲೀಸ್ ಠಾಣೆ ಉದ್ಘಾಟನೆಗೆ ತೆರಳಿದ್ದ ಪರಮೇಶ್ವರ, ಮತ್ತೆ ವಾಪಸ್ ತುಮಕೂರಿಗೆ ಬರುವ ಮಾರ್ಗ ಬದಲಾವಣೆ ಮಾಡಿದ್ದಕ್ಕೆ ಗರಂ ಆಗಿದ್ದಾರೆ.

ಇನ್ನು ತುಮಕೂರು ಕೊರಟಗೆರೆ ಮಾರ್ಗ ಮಧ್ಯದಲ್ಲಿ ಬರುವ ಗ್ರಾಮ ಯಲ್ಲಾಪುರದಲ್ಲಿ ಜಾತ್ರೆ ಪ್ರಯುಕ್ತ ಡಿವೈಎಸ್‌ಪಿ ಮಾರ್ಗ ಬದಲಾವಣೆ ಮಾಡಿದ್ದರು. ಆದ್ದರಿಂದ ಗೃಹ ಸಚಿವರನ್ನು ಬದಲಿ ಮಾರ್ಗದಲ್ಲಿ ಕರೆತಂದಿದ್ದಕ್ಕೆ ಪರಮೇಶ್ವರ್ ಸಿಟ್ಟಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾತ್ರೆ ಮಾಡಲು ಪರ್ಮೀಷನ್ ಕೊಟ್ಟಿದ್ದು ಯಾರು ಎಂದು ತುಮಕೂರಿನ ಪ್ರವಾಸಿ ಮಂದಿರದಲ್ಲಿ ಡಿವೈಎಸ್‌ಪಿಗೆ ತರಾಟೆ ತೆಗೆದುಕೊಂಡರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 10, 2024 05:40 PM