ಸತತ ನಾಲ್ಕು ಸೋಲು… ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾ
Hong Kong Sixes 2025: ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 2 ರನ್ಗಳ ರೋಚಕ ಜಯ ಸಾಧಿಸಿತ್ತು. ಇದಾದ ಬಳಿಕ ಕುವೈತ್ ವಿರುದ್ಧ 27 ರನ್ಗಳಿಂದ ಸೋಲನುಭವಿಸಿದ್ದ ಭಾರತ ತಂಡವು ಆ ಬಳಿಕ ಯುಎಇ ವಿರುದ್ಧ 4 ವಿಕೆಟ್ಗಳಿಂದ ಪರಾಜಯಗೊಂಡಿತ್ತು. ಇನ್ನು ನೇಪಾಳ ವಿರುದ್ಧ 92 ರನ್ಗಳಿಂದ ಸೋಲೊಪ್ಪಿಕೊಂಡಿದ್ದ ಭಾರತ ತಂಡವು ಇದೀಗ ಶ್ರೀಲಂಕಾ ವಿರುದ್ಧ ಕೂಡ ಮುಗ್ಗರಿಸಿದೆ.
ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಿಂದ ಭಾರತ ತಂಡವು ಹೊರಬಿದ್ದಿದೆ. ಅದು ಕೂಡ ಸತತ ನಾಲ್ಕು ಸೋಲುಗಳೊಂದಿಗೆ. ನಿನ್ನೆ (ನ.8) ನಡೆದ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲುಂಡಿದ್ದ ಟೀಮ್ ಇಂಡಿಯಾ ಇಂದು ಮತ್ತೆ ಶ್ರೀಲಂಕಾ ವಿರುದ್ಧ ಸೋಲನುಭವಿಸಿದೆ. ಮೊಂಗ್ ಕೊಕ್ನ ಮಿಷನ್ ರೋಡ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 6 ಓವರ್ಗಳಲ್ಲಿ 138 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 6 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 90 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಅಂತಿಮ ಪಂದ್ಯದಲ್ಲಿ 48 ರನ್ಗಳ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಭಾರತ ತಂಡವು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಿಂದ ಹೊರಬಿದ್ದಿದೆ.
ಇದಕ್ಕೂ ಮುನ್ನ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 2 ರನ್ಗಳ ರೋಚಕ ಜಯ ಸಾಧಿಸಿತ್ತು. ಇದಾದ ಬಳಿಕ ಕುವೈತ್ ವಿರುದ್ಧ 27 ರನ್ಗಳಿಂದ ಸೋಲನುಭವಿಸಿದ್ದ ಭಾರತ ತಂಡವು ಆ ಬಳಿಕ ಯುಎಇ ವಿರುದ್ಧ 4 ವಿಕೆಟ್ಗಳಿಂದ ಪರಾಜಯಗೊಂಡಿತ್ತು.
ಇನ್ನು ನೇಪಾಳ ವಿರುದ್ಧ 92 ರನ್ಗಳಿಂದ ಸೋಲೊಪ್ಪಿಕೊಂಡಿದ್ದ ಭಾರತ ತಂಡವು ಇದೀಗ ಶ್ರೀಲಂಕಾ ವಿರುದ್ಧ ಕೂಡ ಮುಗ್ಗರಿಸಿದೆ. ಈ ಮೂಲಕ ಆಡಿದ 5 ಪಂದ್ಯಗಳಲ್ಲಿ ಸತತ 4 ಸೋಲನುಭವಿಸಿ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಅಭಿಯಾನವನ್ನು ಅಂತ್ಯಗೊಳಿಸಿದೆ.
ಭಾರತ ತಂಡ: ಭರತ್ ಚಿಪ್ಲಿ , ಪ್ರಿಯಾಂಕ್ ಪಾಂಚಾಲ್ , ದಿನೇಶ್ ಕಾರ್ತಿಕ್ (ನಾಯಕ) , ಸ್ಟುವರ್ಟ್ ಬಿನ್ನಿ , ಅಭಿಮನ್ಯು ಮಿಥುನ್ , ಶಹಬಾಝ್ ನದೀಮ್, ರಾಬಿನ್ ಉತ್ತಪ್ಪ.
