ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸಭಾ ಮರ್ಯಾದೆ, ಸಮಯಪ್ರಜ್ಞೆ ಪ್ರದರ್ಶಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

| Updated By: ಸಾಧು ಶ್ರೀನಾಥ್​

Updated on: Dec 01, 2023 | 2:30 PM

ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಜಿಲ್ಲಾಡಳಿತದಿಂದ ಕಾರ್ಯಕ್ರಮ ನಡೆದಿತ್ತು. ವೇದಿಕೆಯಲ್ಲಿ ಮಕ್ಕಳು ನಾಟ್ಯ ಮಾಡುವಾಗ ಕಿವಿಯೋಲೆ ಬಿಚ್ಚಿ ಕೆಳಗೆ ಬಿತ್ತು. ಅದನ್ನು ತಾವು ಕುಳಿತಲ್ಲಿಂದಲೇ ಸೂಕ್ಷ್ಮವಾಗಿ ಗಮನಿಸಿದ ಸಚಿವ ಜೋಶಿ ಸೂಕ್ಷ್ಮತೆ ಪ್ರದರ್ಶಿಸುತ್ತಾ, ಸಭಾ ಗೌರವವನ್ನು ಪಾಲಿಸುತ್ತಾ, ಮಕ್ಕಳು ಕಿವಿಯೋಲೆ ತುಳಿಯಬಾರದೆಂಬ ಕಾಳಜಿ ವಹಿಸಿದರು.

ದಾಸ ಶ್ರೇಷ್ಠ ಕನಕದಾಸ ಜಯಂತಿ (Kanakadasa Jayanti programme) ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ನಾಲ್ಕಾರು ಹೆಣ್ಣುಮಕ್ಕಳು ಲಯಬದ್ಧವಾಗಿ ವೇದಿಕೆಯಲ್ಲಿ ಭರತ ನಾಟ್ಯ ಮಾಡುತ್ತಿದ್ದರು (dancing children). ಆ ವೇಳೆ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Union Minister Pralhad Joshi) ಅವರು ಆ ಮಕ್ಕಳ ಬಗ್ಗೆ ಕಾಳಜಿ ವಹಿಸಿದ ಪ್ರಸಂಗ‌ ನಡೆಯಿತು. ಸಚಿವ ಜೋಷಿ ಅವರು ಮಕ್ಕಳ‌ ಮೇಲ ತೋರಿದ ಕಾಳಜಿ ಅಲ್ಲಿದ್ದವರ ‌ಗಮನ ಸೆಳೆಯಿತು.

ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ನಿನ್ನೆ ಗುರುವಾರ ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ ಮಕ್ಕಳಿಂದ ಭರತ ನಾಟ್ಯ ನಡೆಯುತ್ತಿತ್ತು. ಮಕ್ಕಳು ನಾಟ್ಯ ಮಾಡುವಾಗ ಮಕ್ಕಳ ಕಿವಿಯೋಲೆ ಬಿಚ್ಚಿ ಕೆಳಗೆ ಬಿತ್ತು.

Also Eead: ಕಾಶಿಯಾತ್ರೆ ಯೋಜನೆಯಡಿ ಏಕಕಾಲಕ್ಕೆ 400 ಭಕ್ತಾಧಿಗಳಿಂದ ತೀರ್ಥಯಾತ್ರೆ: ದಿವ್ಯ ದರ್ಶನ ಸಿಗಲಿ ಎಂದು ಶುಭ ಹಾರೈಸಿದ ಪ್ರಲ್ಹಾದ ಜೋಶಿ

ಅದನ್ನು ತಾವು ಕುಳಿತಲ್ಲಿಂದಲೇ ಸೂಕ್ಷ್ಮವಾಗಿ ಗಮನಿಸಿದ ಸಚಿವ ಜೋಶಿ ಅವರು ಸೂಕ್ಷ್ಮತೆ ಪ್ರದರ್ಶಿಸುತ್ತಾ, ಸಭಾ ಗೌರವವನ್ನು ಪಾಲಿಸುತ್ತಾ, ಮಕ್ಕಳು ಕಿವಿಯೋಲೆ ತುಳಿಯಬಾರದೆಂಬ ಕಾಳಜಿ ವಹಿಸಿದರು. ಮೊದಲೇ ಸಿದ್ಧತೆ ಮಾಡಿಕೊಂಡ ಸಚಿವ ಜೋಷಿ ಅವರು… ವೇದಿಕೆಗೆ ಗೌರವ ಸೂಚಿಸುತ್ತಾ ತಾವು ಧರಿಸಿದ್ದ ಶೂಗಳನ್ನು ಮೊದಲು ಕಳಚಿಟ್ಟರು. ಸಮಯ ನೋಡಿಕೊಂಡು ಮಕ್ಕಳಿಗೆ ಗಾಬರಿಯಾಗದಂತೆ ತಾವೇ ಎದ್ದು ಬಂದು ಸಾವಕಾಶವಾಗಿ ಓಲೆ ಎತ್ತಿಕೊಂಡರು. ಬಳಿಕ ವೇದಿಕೆ ಮೇಲಿದ್ದ ಮಹಿಳೆಯೊಬ್ಬರ ಕೈಗೆ ಅದನ್ನು ನೀಡಿ, ಜೋಪಾನ ಎಂದರು. ಹಿರಿಯರಾದ ಸಚಿವ ಜೋಷಿ ಅವರ ಈ ನಡವಳಿಕೆ ಸಭಿಕರ ಗಮನ ಸೆಳೆಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ