AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಅತ್ಯಂತ ಶುಭ ದಿನ

Horoscope Today: ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಅತ್ಯಂತ ಶುಭ ದಿನ

ಭಾವನಾ ಹೆಗಡೆ
|

Updated on: Aug 22, 2026 | 6:29 AM

Share

ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 22, 2026ರ ದಿನ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಶ್ರಾವಣ ಶನಿವಾರದ ಮಹತ್ವ, ರಾಹುಕಾಲ, ಶುಭಕಾಲದ ಮಾಹಿತಿ ಹಾಗೂ ಮೇಷದಿಂದ ಸಿಂಹ ರಾಶಿಯವರೆಗಿನ ಪ್ರತಿಯೊಂದು ರಾಶಿಗಳ ಆರ್ಥಿಕ, ವ್ಯವಹಾರ, ಆರೋಗ್ಯ ಮತ್ತು ಸಂಬಂಧಗಳ ಕುರಿತು ವಿವರವಾದ ಫಲಗಳನ್ನು ನೀಡಿದ್ದಾರೆ. ಶುಭ ಬಣ್ಣ, ದಿಕ್ಕು, ಅದೃಷ್ಟ ಸಂಖ್ಯೆ ಹಾಗೂ ಜಪಿಸಬೇಕಾದ ಮಂತ್ರಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 22,ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸದ ಈ ದಿನ ಶುಕ್ಲ ಪಕ್ಷ ದಶಮಿ, ಜೇಷ್ಠಾ ನಕ್ಷತ್ರ, ವೈದೃತಿ ಯೋಗ ಮತ್ತು ತೈತಲ ಕರಣ ಇರಲಿದೆ.

ಈ ದಿನದ ರಾಹುಕಾಲವು ಬೆಳಗ್ಗೆ 9 ಗಂಟೆ 15 ನಿಮಿಷದಿಂದ 10 ಗಂಟೆ 48 ನಿಮಿಷದವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲವು ಮಧ್ಯಾಹ್ನ 1 ಗಂಟೆ 56 ನಿಮಿಷದಿಂದ 3 ಗಂಟೆ 29 ನಿಮಿಷದವರೆಗೆ ಇರಲಿದೆ. ಈ ಶ್ರಾವಣ ಶನಿವಾರವು ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಅತ್ಯಂತ ಶುಭಕರವಾಗಿದ್ದು, ಗ್ರಹಕಾಟದಿಂದ ಮುಕ್ತಿ ಪಡೆಯಲು ವಿಶೇಷ ಕಾಲವಾಗಿದೆ. ಈ ದಿನ ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಗುರೂಜಿ ಶುಭ ಕೋರಿದ್ದಾರೆ.

 

Follow Us