Horoscope Today: ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ!
ಅಕ್ಟೋಬರ್ 25, ಭಾನುವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಅಕ್ಟೋಬರ್ 25, ಭಾನುವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಪರಾಭವನಾಮ ಸಂವತ್ಸರದ ದಕ್ಷಿಣಾಯನ ಆಶ್ವಿಜಮಾಸ ಶರದೃತು ಶುಕ್ಲಪಕ್ಷ ಚತುರ್ದಶಿ, ರೇವತಿ ನಕ್ಷತ್ರ ಹರ್ಷಣ ಯೋಗ, ವಣಿಜ ಕರಣ ಇರತಕ್ಕಂತ ಈ ದಿನವು ಹಲವು ಶುಭಫಲಗಳನ್ನು ತರಲಿದೆ.
ರವಿ ತುಲಾ ರಾಶಿಯಲ್ಲಿ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ (ಬುಧನ ನಕ್ಷತ್ರ) ಸಂಚಾರ ಮಾಡುತ್ತಾನೆ. ಬುಧ-ಚಂದ್ರ ಗ್ರಹಗಳ ಸಂಯೋಗದಿಂದ ಎಲ್ಲಾ ರಾಶಿಯವರು ತಮ್ಮ ಪ್ರಯತ್ನಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗಲಿದೆ. ಇಂದು ಸಂಜೆ 4 ಗಂಟೆ 27 ನಿಮಿಷದಿಂದ 5 ಗಂಟೆ 56 ನಿಮಿಷದ ತನಕ ರಾಹುಕಾಲ ಇರುತ್ತದೆ. ಬೆಳಗ್ಗೆ 10 ಗಂಟೆ 35 ನಿಮಿಷದಿಂದ 11 ಗಂಟೆ 3 ನಿಮಿಷದ ತನಕ ಸರ್ವ ಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭ ಕಾಲ ಇರುತ್ತದೆ.
ಇಂದು ಕೋಜಾಗರಿ ಮಹಾಲಕ್ಷ್ಮಿ ವ್ರತ, ಪೂಜೆ ನಡೆಯಲಿದ್ದು, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ ಕೂಡ ನಡೆಯುವ ಪರ್ವದಿನ ಇದಾಗಿದೆ. ಈ ಭಾನುವಾರ, ಸೂರ್ಯನ ದಿನವಾದ್ದರಿಂದ ವಾರಪೂರ್ತಿ ಹಾಕಿಕೊಳ್ಳಬೇಕಾದ ಯೋಜನೆಗಳಿಗೆ ನಿರ್ಣಯಗಳನ್ನು ತೆಗೆದುಕೊಳ್ಳಲು ಸೂಕ್ತ ದಿನವಾಗಿದೆ. ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗಿನ ರಾಶಿಗಳಿಗೆ ಈ ದಿನದ ಗ್ರಹಗಳ ಪ್ರಭಾವದಿಂದ ದೊರೆಯುವ ಫಲಗಳ ಸಂಕ್ಷಿಪ್ತ ವಿವರಗಳನ್ನು ಡಾ. ಬಸವರಾಜ ಗುರೂಜಿ ಅವರು ನೀಡಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್ಗೆ ತಿಳಿಸುತ್ತೇವೆಂದ ವಕೀಲ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ

