Horoscope Today: ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ

Updated on: Aug 30, 2026 | 6:41 AM

30 ಆಗಸ್ಟ್ 2026, ಭಾನುವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 30, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರದ, ದಕ್ಷಿಣಾಯನ ಶ್ರಾವಣ ಮಾಸದ, ಕೃಷ್ಣ ಪಕ್ಷ ಬಿದಿಗೆ ತಿಥಿಯ ಪೂರ್ವಭಾದ್ರ ನಕ್ಷತ್ರ, ಶೂಲ ಯೋಗ ಮತ್ತು ಗರ್ಜಕರಣದಿಂದ ಕೂಡಿದೆ.

ಮಧ್ಯಾಹ್ನ 1 ಗಂಟೆ 53 ನಿಮಿಷದಿಂದ 3 ಗಂಟೆ 26 ನಿಮಿಷದವರೆಗೆ ಶುಭ ಕಾಲವಿದ್ದು, ಇದು ಮಹತ್ವದ ನಿರ್ಧಾರಗಳು, ಭೂಮಿ ಖರೀದಿ, ಕಾರ್ಯಾರಂಭ ಮತ್ತು ವಸ್ತು ಖರೀದಿಗಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ. ರಾಹುಕಾಲವು ಸಂಜೆ 4 ಗಂಟೆ 58 ನಿಮಿಷದಿಂದ 6 ಗಂಟೆ 31 ನಿಮಿಷದವರೆಗೆ ಇರುತ್ತದೆ. ಈ ದಿನ ಸಾಕ್ಷಾತ್ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಶಂಕರಲಿಂಗ ಭಗವಾನರ ಜಯಂತಿ ಕೂಡ ಆಗಿದೆ. ಸಣ್ಣ ಕೈಗಾರಿಕಾ ದಿನವಾಗಿಯೂ ಸಹ ಇದನ್ನು ಆಚರಿಸಲಾಗುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Loading...
Unable to load recommendations.
Follow Us