Horoscope Today: ಇಂದು ಈ ರಾಶಿಯವರಿಗೆ ಹಿತಶತ್ರುಗಳ ಕಾಟ!
ಅಕ್ಟೋಬರ್ 30, ಶುಕ್ರವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಅಕ್ಟೋಬರ್ 30, ಶುಕ್ರವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನವು ಇದು ಪರಾಭವ ನಾಮ ಸಂವತ್ಸರ, ದಕ್ಷಿಣಾಯನ ಆಶ್ವೀಜ ಮಾಸ, ಶರದೃತು, ಕೃಷ್ಣಪಕ್ಷದ ಪಂಚಮಿ, ಮೃಗಶಿರಾ ನಕ್ಷತ್ರದ ಶಿವಯೋಗ, ಕೌಲವ ಕರಣ ಇರತಕ್ಕಂತಹ ಶುಭ ದಿನವಾಗಿದೆ.
ಈ ದಿನದ ರಾಹುಕಾಲ ಬೆಳಗ್ಗೆ 10:34 ರಿಂದ 12:02 ರ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 12:03 ರಿಂದ 1:30 ರ ತನಕ ಇರಲಿದೆ. ಶುಕ್ರವಾರ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು, ದೇವಿಯ ಅನುಗ್ರಹ ಪಡೆಯಲು ಪರ್ವ ದಿನವೂ ಆಗಿದೆ. ಇಂದು ಶ್ರೀ ಚಾಮುಂಡೇಶ್ವರಿಯ ಮುಡಿ ಉತ್ಸವ ನಡೆಯಲಿದೆ. ಜೊತೆಗೆ ವಿಶ್ವ ಮಿತವ್ಯಯ ದಿನವನ್ನೂ ಆಚರಿಸಲಾಗುತ್ತದೆ. ರವಿ ತುಲಾ ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾನೆ ಎಂದು ಗುರೂಜಿ ತಿಳಿಸಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
