ಕಾಡು ನಾಯಿಗಳ ರಣ ಭೀಕರ ಬೇಟೆ, ನಡುರಸ್ತೇಲಿ ಕಡವೆ ಬೇಟೆಯ ವಿಡಿಯೋ ವೈರಲ್

Edited By:

Updated on: Feb 06, 2025 | 2:21 PM

ನಡು ರಸ್ತೆಯಲ್ಲಿ ಬೇಟೆಯಾಡಿ ರಸ್ತೆಬದಿಯೇ ಕಡವೆಯನ್ನು ಕಾಡು ನಾಯಿಗಳು ಭಕ್ಷಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಪ್ರವಾಸಿಗರ ಮೊಬೈಲ್​​ನಲ್ಲಿ ಸೆರೆಯಾಗಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿ ಸಮೀಪ ಘಟನೆ ನಡೆದಿದೆ.

ಚಾಮರಾಜನಗರ, ಫೆಬ್ರವರಿ 6: ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಕ್ಯಾತರಾಯನಗುಡಿಯ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಕಾಡು ನಾಯಿಗಳ ರಣ ಭೀಕರ ಬೇಟೆ ಕಾಣಸಿಕ್ಕಿದೆ. ಪ್ರವಾಸಿಗರ ಎದುರೇ ವೈಲ್ಡ್ ಡಾಗ್ಸ್ ಗ್ಯಾಂಗ್ ಕಡವೆಯನ್ನು ಕೊಂದು ತಿಂದಿವೆ. ಸೀಳುನಾಯಿಗಳ ರಕ್ಕಸ ಬೇಟೆಗೆ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಕೂಡ ತಪ್ಪಿಸಿಕೊಳ್ಳಲಾಗದೆ ಕಡವೆ ಆಹಾರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ