ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಭೀಕರ ಅಪಘಾತ! ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ, ವಿಡಿಯೋ ಇದೆ ನೋಡಿ

|

Updated on: Sep 15, 2021 | 12:42 PM

Bengaluru Accident: ಕಾರು ಗುದ್ದಿದ ರಭಸಕ್ಕೆ ಫ್ಲೈ ಓವರ್ನಿಂದ ಯುವಕ, ಯುವತಿ ಹಾರಿ ಬಿದ್ದಿದ್ದಾರೆ. ಸುಮಾರು 150 ರಿಂದ 200 ಅಡಿ ದೂರಕ್ಕೆ ಯುವಕ, ಯುವತಿ ಹಾರಿ ಬಿದ್ದಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಇಬ್ಬರು ಸರ್ವಿಸ್ ರೋಡ್​ಗೆ ಹಾರಿ ಬಿದ್ದಿದ್ದಾರೆ.

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈ ಓವರ್ ಮೇಲೆ ನಡೆದ ಕಾರು, ಬೈಕ್ ಅಪಘಾತದ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಫ್ಲೈ ಓವರ್​ನಲ್ಲಿ ಬೈಕ್ ಪಾರ್ಕ್ ಮಾಡುವಾಗ ಯುವಕ, ಯುವತಿಗೆ ಕಾರು ವೇಗವಾಗಿ ಬಂದು ಗುದ್ದಿದೆ. ಸುಮಾರು 120 ಕಿಮೀ ಸ್ಪೀಡ್​ನಲ್ಲಿ ಕಾರು ಬಂದು ಬೈಕ್​ಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಫ್ಲೈ ಓವರ್ನಿಂದ ಯುವಕ, ಯುವತಿ ಹಾರಿ ಬಿದ್ದಿದ್ದಾರೆ. ಸುಮಾರು 150 ರಿಂದ 200 ಅಡಿ ದೂರಕ್ಕೆ ಯುವಕ, ಯುವತಿ ಹಾರಿ ಬಿದ್ದಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಇಬ್ಬರು ಸರ್ವಿಸ್ ರೋಡ್​ಗೆ ಹಾರಿ ಬಿದ್ದಿದ್ದಾರೆ. ಇಬ್ಬರೂ ನೆಲಕ್ಕೆ ಬೀಳುವ ಮೊದಲು 8-10 ಸೆಕೆಂಡ್ ಗಾಳಿಯಲ್ಲೇ ಇದ್ದರು. ಫ್ಲೈ ಓವರ್ ಮೇಲಿಂದ ಬಿದ್ದ ಪರಿಣಾಮದಿಂದಲೇ ಯುವಕ- ಯುವತಿ ಸಾವನ್ನಪ್ಪಿದ್ದಾರೆ. ತಮ್ಮ ಬೈಕ್​ನಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ಪಾರ್ಕ್ ಮಾಡುತ್ತಿದ್ದರಂತೆ. ಈ ವೇಳೆ ಭೀಕರ ಅಪಘಾತ ನಡೆದಿದೆ.