Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಕೋಟೆ ಕಳ್ಳರ ಜೋಡಿ ಟೊಮೆಟೊ ಹಣ್ಣುಗಳ ಜೊತೆ ಅವುಗಳನ್ನು ಸಾಗಿಸಲು ಟ್ರ್ಯಾಕ್ಟರ್​ಗಳನ್ನೂ ಕದ್ದರು!

ಹೊಸಕೋಟೆ ಕಳ್ಳರ ಜೋಡಿ ಟೊಮೆಟೊ ಹಣ್ಣುಗಳ ಜೊತೆ ಅವುಗಳನ್ನು ಸಾಗಿಸಲು ಟ್ರ್ಯಾಕ್ಟರ್​ಗಳನ್ನೂ ಕದ್ದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 31, 2023 | 11:30 AM

ಟೊಮೆಟೊ ಹಣ್ಣುಗಳ ಜತೆ ತೋಟದಲ್ಲಿ ಬೆಳೆದಿದ್ದ ಬೇರೆ ತರಕಾರಿಗಳನ್ನೂ ಲಪಟಾಯಿಸುತ್ತಿದ್ದ ಕಳ್ಳರು ಕದ್ದಿದ್ದು ಒಂದು ಡಜನ್ ಟ್ರ್ಯಾಕ್ಟರ್ ಗಳು ಅಂದರೆ ನಂಬುತ್ತೀರಾ?

ಹೊಸಕೋಟೆ: ಕಳ್ಳರು ಶ್ರೀಮಂತರ ಮನೆ, ಚಿನ್ನಾಭರಣಗಳ ಅಂಗಡಿ ಮೊದಲಾದವುಗಳನ್ನು ಟಾರ್ಗೆಟ್ ಮಾಡಿದರೆ ಕೋಲಾರ ಮೂಲದ ಶಿವಾನಂದ್ ಮತ್ತು ಆನಂದ್ ಹೆಸರಿನ ಬುದ್ಧಿವಂತ ಕಳ್ಳರು ಚಿನ್ನದ ಬೆಲೆಗೆ ಮಾರಾಟವಾಗುತ್ತಿರುವ ಟೊಮೆಟೊ ಫಸಲನ್ನು ಟಾರ್ಗೆಟ್ ಮಾಡಿ ತಮ್ಮ ಕೈಚಳಕ ಮೆರೆಯುತ್ತಿದ್ದರು. ಗಮನಿಸಬೇಕಾದ ಅಂಶವೆಂದರೆ ಅವರು ಕೋಲಾರ, ಚಿಂತಾಮಣಿ ಮತ್ತಿ ಹೊಸಕೋಟೆ ಮೊದಲಾದ ಪ್ರದೇಶಗಳಲ್ಲಿ ಕೇವಲ ಟೊಮೊಟೊ ಹಣ್ಣುಗಳನ್ನು ಮಾತ್ರ ಕದಿಯುತ್ತಿರಲಿಲ್ಲ, ಅವುಗಳನ್ನು ಮಾರ್ಕೆಟ್ ಪ್ರದೇಶಕ್ಕೆ ಸಾಗಿಸಲು ಟ್ರ್ಯಾಕ್ಟರ್ ಗಳನ್ನೂ ಕದಿಯುತ್ತಿದ್ದರು! ಟೊಮೆಟೊ ಹಣ್ಣುಗಳ ಜತೆ ತೋಟದಲ್ಲಿ ಬೆಳೆದಿದ್ದ ಬೇರೆ ತರಕಾರಿಗಳನ್ನೂ ಕಳ್ಳರ ಜೋಡಿ ಲಪಟಾಯಿಸುತ್ತಿತ್ತಂತೆ. ಅವರು ಕದ್ದಿದ್ದು ಒಂದಲ್ಲ ಎರಡಲ್ಲ, ಒಂದು ಡಜನ್ ಟ್ರ್ಯಾಕ್ಟರ್ ಗಳು! ದೂರುಗಳನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಪೋಲಿಸರು ಕಳ್ಳರನ್ನು ಬಂಧಿಸಿ ಅವರಿಂದ 12 ಟ್ರ್ಯಾಕ್ಟರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ