Rains cause destruction: ಚಳ್ಳಕೆರೆ ತಾಲ್ಲೂಕಿನಲ್ಲಿ ಭಾರಿ ಮಳೆ, ಮಿಡ್ಲುಗಟ್ಟೆ ಪಿಂಜಾರಹಟ್ಟಿಯ ಮನೆಗಳಿಗೆ ದೊಡ್ಡ ಪ್ರಮಾಣದ ಹಾನಿ
ಹೆಸರು ಸೂಚಿಸುವ ಹಾಗೆ ಪಿಂಜಾರ ಸಮುದಾಯದ ಜನ ಇಲ್ಲಿ ವಾಸವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ.
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಕಳೆದ ರಾತ್ರಿ ಸುರಿದ ಗುಡುಗುಸಹಿತ ಭಾರೀ ಮಳೆ ಕೆಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ವಿಡಿಯೋದಲ್ಲಿ ನಿಮಗೆ ಕಾಣುತ್ತಿರುವ ದೃಶ್ಯ ಮಿಡ್ಲುಗಟ್ಟೆ ಪಿಂಜಾರಹಟ್ಟಿಯದು (Midlugatte Pinjarahatti). ಇಲ್ಲಿನ 7 ಮನೆಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ (damaged). ಕೆಲವು ಮನೆಗಳ ಛಾವಣಿ (roof) ಹಾರಿಹೋಗಿ, ಮನೆಗಳಲ್ಲಿ ಮಳೆ ನೀರು ಜಮಾವಣೆಗೊಂಡಿದೆ. ಮನೆ ಅಂಟಿಕೊಂಡಂತೆ ನಿವಾಸಿಗಳು ನಿರ್ಮಿಸಿಕೊಂಡಿದ್ದ ಶೆಡ್ ಗಳು ಕುಸಿದುಬಿದ್ದಿವೆ. ಹೆಸರು ಸೂಚಿಸುವ ಹಾಗೆ ಪಿಂಜಾರ ಸಮುದಾಯದ ಜನ ಇಲ್ಲಿ ವಾಸವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos