Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮಿ ಯೋಜನೆ: ವಿಜಯಪುರ ಗೃಹಿಣಿಯರಿಗೆ ಖಾತೆಗಳಲ್ಲಿ ರೂ. 2000 ಜಮಾ ಆಯಿತು, ಆದರೆ ಊಟಕ್ಕೆ ಪರದಾಡುವಂತಾಯಿತು

ಗೃಹಲಕ್ಷ್ಮಿ ಯೋಜನೆ: ವಿಜಯಪುರ ಗೃಹಿಣಿಯರಿಗೆ ಖಾತೆಗಳಲ್ಲಿ ರೂ. 2000 ಜಮಾ ಆಯಿತು, ಆದರೆ ಊಟಕ್ಕೆ ಪರದಾಡುವಂತಾಯಿತು

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 30, 2023 | 7:49 PM

ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವುದು ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿತ್ತು. ಅದರೆ, ಅವರ ಬೇಕಾಬಿಟ್ಟಿ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಗೃಹಿಣಿಯರು ತಮ್ಮ ಕೈಗಳಲ್ಲಿ ಯಾತಕ್ಕೂ ಬಾರದ ಪೇಪರ್ ಪ್ಲೇಟ್ ಗಳನ್ನು ಹಿಡಿದುಕೊಂಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡಿದರು. ಎಷ್ಟು ಜನಕ್ಕೆ ಊಟ ಸಿಕ್ಕಿತೋ ಗೊತ್ತಿಲ್ಲ. ದೂರದ ಹಳ್ಳಿಗಳಿಂದ ಮಹಿಳೆಯರು ಉಪವಾಸ ಇಲ್ಲವೇ ಅರೆಹೊಟ್ಟೆ ಆಹಾರ ಸೇವಿಸಿ ಹಿಂತಿರುಗಬೇಕಾಯಿತು.

ವಿಜಯಪುರ: ಸಿದ್ದರಾಮಯ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Griha Lakshmi Scheme) ಇಂದು ರಾಜ್ಯಾದ್ಯಂದಯ ಜಾರಿಗೆ ಬಂತು. ರಾಜ್ಯದ ಎಲ್ಲ ಜಿಲ್ಲೆ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ (Women and Child Development Department) ವತಿಯಿಂದ ಆಯೋಜಿಸಲಾಗಿತ್ತು. ಆದರೆ ಕೆಲವೆಡೆ ಕಾರ್ಯಕ್ರಮ ಅಸ್ತವ್ಯಸ್ತಗೊಂಡ ವರದಿಗಳು ಲಭ್ಯವಾಗುತ್ತಿವೆ. ವಿಜಯಪುರ ನಗರದ ಈ ವಿಡಿಯೋ ನೋಡಿ. ಸಾವಿರಾರು ಫಲಾನುಭವಿಗಳ (beneficiaries) ಖಾತೆಗಳಿಗೆ ಎರಡೆರಡು ಸಾವಿರ ರೂ.ಯೇನೋ ಜಮೆಯಾಯಿತು, ಆದರೆ ಅವರೆಲ್ಲ ಮಧ್ಯಾಹ್ನದ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವುದು ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿತ್ತು. ಅದರೆ, ಅವರ ಬೇಕಾಬಿಟ್ಟಿ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಗೃಹಿಣಿಯರು ತಮ್ಮ ಕೈಗಳಲ್ಲಿ ಯಾತಕ್ಕೂ ಬಾರದ ಪೇಪರ್ ಪ್ಲೇಟ್ ಗಳನ್ನು ಹಿಡಿದುಕೊಂಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡಿದರು. ಎಷ್ಟು ಜನಕ್ಕೆ ಊಟ ಸಿಕ್ಕಿತೋ ಗೊತ್ತಿಲ್ಲ. ದೂರದ ಹಳ್ಳಿಗಳಿಂದ ಮಹಿಳೆಯರು ಉಪವಾಸ ಇಲ್ಲವೇ ಅರೆಹೊಟ್ಟೆ ಆಹಾರ ಸೇವಿಸಿ ಹಿಂತಿರುಗಬೇಕಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ