Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ನಮ್ಮವರಿಗೆ ದುರಂಕಾರ, ಸರ್ವಾಧಿಕಾರಿ ಧೋರಣೆ ತೋರ್ತಾರೆ.. ಹಿಗ್ಗಾಮುಗ್ಗಾ ಬೈದ ಎಂಪಿ ರೇಣುಕಾಚಾರ್ಯ

ದಾವಣಗೆರೆ: ನಮ್ಮವರಿಗೆ ದುರಂಕಾರ, ಸರ್ವಾಧಿಕಾರಿ ಧೋರಣೆ ತೋರ್ತಾರೆ.. ಹಿಗ್ಗಾಮುಗ್ಗಾ ಬೈದ ಎಂಪಿ ರೇಣುಕಾಚಾರ್ಯ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2023 | 9:28 PM

ಗೃಹಲಕ್ಷ್ಮೀ ಯೋಜನೆ ಜಾರಿಯಿಂದ ಜನರಿಗೆ ಅನುಕೂಲಕರವಾಗಲಿದೆ. ಆದ್ರೆ, ನಮ್ಮವರು ತಡ ಮಾಡಿದ್ರು. ಕಾಂಗ್ರೆಸ್​ ನಾಯಕರು ಕೊಟ್ಟ ಭರವಸೆಗಳು ಭರವಸೆಯಾಗಿಯೇ ಉಳಿಯಬಾರದು.. ಎಲ್ಲರಿಗೂ ಆದಷ್ಟು ಬೇಗ ಜಾರಿ ಮಾಡ್ಬೇಕು ಎಂದು ಬಿಜೆಪಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.

ದಾವಣಗೆರೆ, ಆ.30: ಜನರ ಮಧ್ಯೆ ಇರಬೇಕು, ಬರೀ ಬಿಜೆಪಿ(BJP) ಕಚೇರಿಯಲ್ಲಿ ಕುಳಿತು ಮಾತನಾಡುವುದಲ್ಲ ಎಂದು ಎಂಪಿ ರೇಣುಕಾಚಾರ್ಯ ಸ್ವ ಪಕ್ಷದ ಕಾರ್ಯವೈಖರಿ ಬಗ್ಗೆ ಕಿಡಿಕಾರಿದ್ದಾರೆ. ದಾವಣಗೆರೆ (Davanagere) ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಭೂತ ಮಟ್ಟದ ಸಮಸ್ಯೆಗಳನ್ನು ಕೇಳಬೇಕು. ಅಧಿಕಾರ ಇದ್ದಾಗಲೇ ಕಾರ್ಯಕರ್ತರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ರಾಜಕಾರಿಣಿಗಳು ಜನರ ಮಧ್ಯೆ ಇರಬೇಕು, ಅವರ ಅಹವಾಲುಗಳನ್ನು ಕೇಳಬೇಕು. ಕೇವಲ ಕಾರ್ಯಕರ್ತರನ್ನು ಚುನಾವಣೆ ಬಂದಾಗ ಬಾವುಟ ಹಿಡಿದುಕೊಳ್ಳಲು ಅಷ್ಟೇ ನಾ ಬಳಸಿಕೊಳ್ಳುವುದು ಎಂದು ಸ್ವ ಪಕ್ಷದ ವಿರುದ್ದವೇ ಕಿಡಿಕಾರಿದ್ದಾರೆ. ಇನ್ನು ಇದೇ ವೇಳೆ ಗೃಹಲಕ್ಷ್ಮೀ ಯೋಜನೆ ಜಾರಿಯಿಂದ ಜನರಿಗೆ ಅನುಕೂಲಕರವಾಗಲಿದೆ. ಆದ್ರೆ, ನಮ್ಮವರು ತಡ ಮಾಡಿದ್ರು. ಕಾಂಗ್ರೆಸ್​ ನಾಯಕರು ಕೊಟ್ಟ ಭರವಸೆಗಳು ಭರವಸೆಯಾಗಿಯೇ ಉಳಿಯಬಾರದು.. ಎಲ್ಲರಿಗೂ ಆದಷ್ಟು ಬೇಗ ಜಾರಿ ಮಾಡ್ಬೇಕು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ