ಜಗ್ಗೇಶ್ ಹೊಟ್ಟೆಯ ಮೇಲೆ ರಾಯರ ಹಸ್ತಾಕ್ಷರ ಹಚ್ಚೆ: ಸಸ್ಯಹಾರಿ ಆಗಲು ಅದೇ ಕಾರಣ
Jaggesh: ನಟ ಜಗ್ಗೇಶ್ ತೋಳಿನ ಮೇಲೆ ರಾಘವೇಂದ್ರ ಸ್ವಾಮಿಗಳ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇಂದು (ಆಗಸ್ಟ್ 30) ರಾಯರ 352ನೇ ಆರಾಧನೆಯಲ್ಲಿ ಭಾಗವಹಿಸಿದ್ದಾಗ, ತಮ್ಮ ಹೊಟ್ಟೆಯ ಮೇಲೆ ರಾಯರ ಹಸ್ತಾಕ್ಷರ ಹಚ್ಚೆ ಹಾಕಿಸಿಕೊಂಡಿರುವ ವಿಷಯ ಹೇಳಿದರು. ಹಸ್ತಾಕ್ಷರದ ಹಚ್ಚೆ ತೋರಿಸಿದರು ಸಹ.
ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ತಮ್ಮ ಜೀವನದ ಮೇಲೆ ರಾಘವೇಂದ್ರ ಸ್ವಾಮಿಗಳ ಪ್ರಭಾವದ ಬಗ್ಗೆ ಹಲವು ಬಾರಿ ಜಗ್ಗೇಶ್ ಮಾತನಾಡಿದ್ದಾರೆ. ಇಂದು (ಆಗಸ್ಟ್ 30) ರಾಯರ 352ನೇ ಆರಾಧನೆಗೆಂದು ಬೆಂಗಳೂರಿನ ಸೀತಾಪತಿ ಅಗ್ರಹಾರದ ರಾಘವೇಂದ್ರ ಸ್ವಾಮಿ ಮಠಕ್ಕೆ ಆಗಮಿಸಿದ್ದ ಜಗ್ಗೇಶ್, ಟಿವಿ9 ಜೊತೆ ಮಾತನಾಡುತ್ತಾ, ತಮ್ಮ ಹೊಟ್ಟೆಯ ಮೇಲೆ ರಾಘವೇಂದ್ರ ಸ್ವಾಮಿಗಳ ಹಸ್ತಾಕ್ಷರವನ್ನು ಹಚ್ಚೆ ಹಾಕಿಸಿಕೊಂಡಿರುವ ವಿಷಯ ಹಂಚಿಕೊಂಡರು. ಅದೇ ಕಾರಣಕ್ಕೆ ತಾವು ಸಸ್ಯಹಾರಿಯಾಗಿ ಬದಲಾಗಿದ್ದಾಗಿಯೂ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 30, 2023 11:11 PM
Latest Videos