ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ತಯಾರಿ ಬಗ್ಗೆ ಎಂ.ಕೃಷ್ಣಪ್ಪ ಹೇಳಿದ್ದೇನು?
ಮೋದಿ ರೋಡ್ಶೋ ಹಿನ್ನಲೆ ‘ಅವರ ದೊಡ್ಡ ಹೋರ್ಡಿಂಗ್ಸ್ ಮತ್ತು ಬ್ಯಾರಿಕೇಡ್ಗಳನ್ನ ಹಾಕಲಾಗಿದೆ. ಮೋದಿ ನಮ್ಮ ಕ್ಷೇತ್ರದಿಂದ ರೋಡ್ ಶೋ ನಡೆಸಲಿದ್ದು, ಪುರಸಭೆ, ನಗರಸಭೆ ಬಿಜೆಪಿ ಸದಸ್ಯರು, ಕಾರ್ಯಕರ್ತರು ಖುಷಿಯಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಎಂ.ಕೃಷ್ಣಪ್ಪ ಹೇಳಿದರು.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಹಿನ್ನಲೆ ಇಂದು(ಮೇ.6) ಪ್ರಧಾನಿ ನರೇಂದ್ರ ಮೋದಿ(Narendra Modi) ರೋಡ್ ಶೋ ಮಾಡಲಿದ್ದು, RBI ಲೇಔಟ್ನ ಸೋಮೇಶ್ವರ ಸಭಾ ಭವನದಿಂದ ರೋಡ್ ಶೋ ಪ್ರಾರಂಭವಾಗಲಿದೆ. ಈಗಾಗಲೇ ಮೋದಿ ಸ್ವಾಗತಿಸೋಕೆ ಸಕಲ ತಯಾರಿಗಳು ನಡೀತಿದ್ದು, ರೋಡ್ ಶೋ ತಯಾರಿಯನ್ನ ವೀಕ್ಷಣೆ ಮಾಡಿದ ಬೆಂಗಳೂರು ದಕ್ಷಿಣ ಅಭ್ಯರ್ಥಿ ಎಮ್ ಕೃಷ್ಣಪ್ಪ ಮಾತನಾಡಿ ‘ಮೋದಿ ಅವರ ದೊಡ್ಡ ಹೋರ್ಡಿಂಗ್ಸ್ ಮತ್ತು ಬ್ಯಾರಿಕೇಡ್ಗಳನ್ನ ಹಾಕಲಾಗಿದೆ. ಇನ್ನು ಮೋದಿ ನಮ್ಮ ಕ್ಷೇತ್ರದಿಂದ ರೋಡ್ ಶೋ ನಡೆಸಲಿರುವ ಹಿನ್ನಲೆ ಪುರಸಭೆ, ನಗರಸಭೆ ಬಿಜೆಪಿ ಸದಸ್ಯರು, ಕಾರ್ಯಕರ್ತರು ಖುಷಿಯಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ, ಇನ್ನು ಮೋದಿ ಬರುವುದರಿಂದ ಮತ್ತಷ್ಟು ಮತಗಳು ನಮ್ಮ ಪರ ಬರಲಿವೆ ಎಂದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos