Recipe Of The Day: ಬೇಳೆ ಹೋಳಿಗೆ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Edited By:

Updated on: Sep 19, 2021 | 9:11 AM

ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ.

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದಿನ ಅಡುಗೆ ಅದುವೆ ಬೇಳೆ ಹೋಳಿಗೆ.

ಬೇಳೆ ಹೋಳಿಗೆ ಮಾಡಲು ಬೇಕಾಗುವ ಸಾಮಾಗ್ರಿಗಳು ಕಡಲೆ ಬೇಳೆ, ಹೋಳಿಗೆ ಹಿಟ್ಟು, ಅರಿಶಿಣ ಪುಡಿ, ಬೆಲ್ಲ, ಉಪ್ಪು, ಏಲಕ್ಕಿ ಪುಡಿ, ಅಡುಗೆ ಎಣ್ಣೆ.

ಬೇಳೆ ಹೋಳಿಗೆ ಮಾಡುವ ವಿಧಾನ
ಮೊದಲು ನೆನೆಸಿದ ಕಡಲೆ ಬೇಳೆ ಬೇಯಿಸಿಕೊಳ್ಳಿ. ಬಳಿಕ ನೀರು ತೆಗೆದು ಬೆಲ್ಲ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಳ್ಳಿ. ನಂತರ ಇದನ್ನು ರುಬ್ಬಿಕೊಂಡು ಹೂರ್ಣ ಮಾಡಿಕೊಳ್ಳಿ. ಬಳಿಕ ಹೋಳಿಗೆ ಹಿಟ್ಟಿಗೆ ಅರಿಶಿಣ ಹಾಕಿ ಕಲಸಿಕೊಳ್ಳಿ. ನಂತರ ಹೋಳಿಗೆ ಆಕಾರಕ್ಕೆ ತಟ್ಟಿಕೊಂಡು ಹೂರ್ಣ ಇಟ್ಟು ಲಟ್ಟಿಸಬೇಕು. ಒಂದು ತವಾಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಹೋಳಿಗೆ ಹಾಕಿ ಕಾಯಿಸಿಕೊಳ್ಳಿ. ಈಗ ಬೇಳೆ ಹೋಳಿಗೆ ಸವಿಯಲು ಸಿದ್ಧ.

ಇದನ್ನೂ ಓದಿ:
Recipe of the day: ಪಂಚಖಾದ್ಯ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ದೇವರ ನೈವೇದ್ಯಕ್ಕಾಗಿ ಬಾಗಲಕೋಟೆ ಸ್ಪೆಷಲ್ ಮೋದಕ ಮತ್ತು ಖರ್ಜಿಕಾಯಿ ಮಾಡಿ

Follow Us
Web contact

TV9 Kannada

Read More