ದೇವರ ನೈವೇದ್ಯಕ್ಕಾಗಿ ಬಾಗಲಕೋಟೆ ಸ್ಪೆಷಲ್ ಮೋದಕ ಮತ್ತು ಖರ್ಜಿಕಾಯಿ ಮಾಡಿ
ಒಂದೊಂದು ಭಾಗದವರು ಒಂದೊಂದು ವಿಧದಲ್ಲಿ ಮೋದಕ ಮಾಡಿ ಸವಿಯುತ್ತಾರೆ. ಅದರಂತೆ ಬಾಗಲಕೋಟೆಯಲ್ಲಿ ಮೋದಕವನ್ನು ಹೇಗೆ ಮಾಡುತ್ತಾರೆ ಎಂದು ಇಲ್ಲಿ ತಿಳಿಸಲಾಗಿದೆ.
ಗಣಪತಿಗೆ ಪ್ರಿಯವಾದ ಖಾದ್ಯ ಎಂದರೆ ಅದು ಮೋದಕ. ಹೀಗಾಗಿ ಗಣೇಶ ಚತುರ್ಥಿಯಂದು ಹಲವರ ಮನೆಯಲ್ಲಿ ಮೋದಕ ಮಾಡುತ್ತಾರೆ. ಮೋದಕ ಮಾಡಿ ಗಣಪನಿಗೆ ನೈವೇದ್ಯ ಮಾಡುತ್ತಾರೆ. ಆದರೆ ಕೆಲವರಿಗೆ ಮೋದಕ ಬಗ್ಗೆ ಗೊತ್ತಿಲ್ಲ. ಅದನ್ನು ಹೇಗೆ ತಯಾರು ಮಾಡುತ್ತಾರೆ ಎಂದು ತಿಳಿದಿಲ್ಲ. ನಾಲಿಗೆಗೆ ಹೆಚ್ಚು ರುಚಿ ನೀಡುವ ಮೋದಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಂದೊಂದು ಭಾಗದವರು ಒಂದೊಂದು ವಿಧದಲ್ಲಿ ಮೋದಕ ಮಾಡಿ ಸವಿಯುತ್ತಾರೆ. ಅದರಂತೆ ಬಾಗಲಕೋಟೆಯಲ್ಲಿ ಮೋದಕವನ್ನು ಹೇಗೆ ಮಾಡುತ್ತಾರೆ ಎಂದು ಇಲ್ಲಿ ತಿಳಿಸಲಾಗಿದೆ.
ಬಾಗಲಕೋಟೆ ಸ್ಪೆಷಲ್ ಮೋದಕ ಮಾಡಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ, ಬಾದಾಮಿ, ಹುರುಗಡಲೆ, ಬೆಲ್ಲ, ಗೋಡಂಬಿ, ಗಸಗಸೆ, ಕೊಬ್ಬರಿ, ಏಲಕ್ಕಿ ಪುಡಿ, ಮೈದಾ ಹಿಟ್ಟು, ಉಪ್ಪು, ಎಣ್ಣೆ.
ಬಾಗಲಕೋಟೆ ಸ್ಪೆಷಲ್ ಮೋದಕ ಮಾಡುವ ವಿಧಾನ
ಮೊದಲು ಕಡಲೆಕಾಯಿ, ಬಾದಾಮಿ, ಹುರುಗಡಲೆ, ಬೆಲ್ಲ, ಗೋಡಂಬಿ, ಗಸಗಸೆ, ಕೊಬ್ಬರಿ, ಏಲಕ್ಕಿ ಪುಡಿಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಮೈದಾ ಹಿಟ್ಟು, ಉಪ್ಪು, ಎಣ್ಣೆ ಹಾಕಿ ಕಲಸಿಕೊಳ್ಳಿ. ನಂತರ ಮೊದಕ ಆಕಾರಕ್ಕೆ ಮಾಡಿ ಅದರ ಮಧ್ಯೆ ರುಬ್ಬಿದ ಮಿಶ್ರಣ ಹಾಕಿ ಎಣ್ಣೆಯಲ್ಲಿ ಕರಿಯಿರಿ. ಈಗ ರುಚಿಕರವಾದ ಮೋದಕ ಸವಿಯಲು ಸಿದ್ಧ.
ಖರ್ಜಿಕಾಯಿ ಮಾಡುವ ವಿಧಾನ
ಮೈದಾ ಹಿಟ್ಟು, ಉಪ್ಪು, ಎಣ್ಣೆ ಹಾಕಿ ಕಲಸಿಕೊಳ್ಳಿ. ಬಳಿಕ ಹಸಿ ಕೊಬ್ಬರಿ , ಬೆಲ್ಲ ಹಾಕಿ ಹೂರ್ಣ ಮಾಡಿಕೊಳ್ಳಿ. ಬಳಿಕ ಖರ್ಜಿಕಾಯಿ ಆಕಾರಕ್ಕೆ ಮಾಡಿ ಮಧ್ಯ ಹೂರ್ಣ ಹಾಕಿ ಮುಚ್ಚಿ. ಎಣ್ಣೆಯಲ್ಲಿ ಕರಿಯಿರಿ. ಈಗ ರುಚಿಕರವಾದ ಖರ್ಜಿಕಾಯಿ ಸವಿಯಲು ಸಿದ್ಧ.
ಇದನ್ನೂ ಓದಿ: