ಸದನದಲ್ಲೂ ಚರ್ಚೆ ಆಯ್ತು ಸಂಚಾರಿ ವಿಜಯ್​ ಸಾಧನೆ; ಹಾಡಿ ಹೊಗಳಿದ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯ್​ ಸಾಧನೆ ಬಗ್ಗೆ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದ ನಟನಿಗೆ ಸದನದಲ್ಲಿ ನಮನ ಸಲ್ಲಿಸಲಾಯಿತು.

ಖ್ಯಾತ ನಟ ಸಂಚಾರಿ ವಿಜಯ್​ ನಿಧನರಾಗಿದ್ದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅಪಘಾತದಿಂದ ಅವರು ಅಕಾಲಿಕ ಮರಣಕ್ಕೆ (ಜೂ.15) ಒಳಗಾದರು. ಈಗ ಸದನದಲ್ಲೂ ಸಂಚಾರಿ ವಿಜಯ್​ ಬಗ್ಗೆ ಪ್ರಸ್ತಾಪ ಆಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯ್​ ಸಾಧನೆ ಬಗ್ಗೆ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದ ನಟನಿಗೆ ಸದನದಲ್ಲಿ ನಮನ ಸಲ್ಲಿಸಲಾಯಿತು. ಇದು ಸಂಚಾರಿ ವಿಜಯ್​ ಅಭಿಮಾನಿಗಳ ಪಾಲಿಗೆ ಹೆಮ್ಮೆಯ ವಿಚಾರ.

‘ಸಂಚಾರಿ ವಿಜಯ್​ ತುಂಬ ಪ್ರತಿಭಾನ್ವಿತ ಕಲಾವಿದನಾಗಿದ್ದರು. ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಅವರು ಮಂಗಳಮುಖಿ ಪಾತ್ರ ಮಾಡಿ ಜನಮನ ಗೆದ್ದಿದ್ದರು. ಆ ಪಾತ್ರ ಮಾಡುವುದು ಅಷ್ಟು ಸುಲಭ ಆಲ್ಲ. ನಟನೆಯಲ್ಲಿ ಪರಿಣಿತಿ ಇರುವವರು ಮತ್ತು ಮಂಗಳಮುಖಿಯರ ಬದುಕನ್ನು ಅರಿತವರಿಗೆ ಮಾತ್ರ ಅದು ಸಾಧ್ಯ. ಅವರು ನಟಿಸಿದ್ದ ‘ಹರಿವು’ ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಮಾನವೀಯತೆ ಮೆರೆದಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:

ಗಮನ ಸೆಳೆಯುತ್ತಿರುವ ‘ಪುಕ್ಸಟ್ಟೆ ಲೈಫು’ ಟ್ರೈಲರ್; ಸಂಚಾರಿ ವಿಜಯ್​ರನ್ನು ನೋಡಿ ಕಣ್ತುಂಬಿಕೊಂಡ ಅಭಿಮಾನಿಗಳು

ಸಂಚಾರಿ ವಿಜಯ್​ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ

Click on your DTH Provider to Add TV9 Kannada