ಚಟ್​ಪಟ್;​ ಸರಳವಾದ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ

Edited By:

Updated on: Aug 06, 2021 | 8:01 AM

ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಚಟ್​ಪಟ್​​  10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಚಟ್​ಪಟ್​​​  ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಲಾಕ್​ಡೌನ್​ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು, ಚಟ್​ಪಟ್​​ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಚಟ್​ಪಟ್​​  10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಚಟ್​ಪಟ್​​​  ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಚಟ್​ಪಟ್​ ಮಾಡಲು ಬೇಕಾಗುವ ಸಾಮಾಗ್ರಿಗಳು ಮೈದಾಹಿಟ್ಟು, ಚಿರೋಟೊ ರವೆ, ಓಂ ಕಾಳು, ಅಡುಗೆ ಎಣ್ಣೆ, ಜೀರಿಗೆ, ಖಾರದ ಪುಡಿ, ಹೆಸರು ಬೇಳೆ, ಉಪ್ಪು.

ಚಟ್​ಪಟ್​ ಮಾಡುವ ವಿಧಾನ:
ಒಂದು ಪಾತ್ರೆಗೆ ಮೈದಾಹಿಟ್ಟು, ಚಿರೋಟೊ ರವೆ, ಓಂ ಕಾಳು, ಅಡುಗೆ ಎಣ್ಣೆ, ಜೀರಿಗೆ, ಖಾರದ ಪುಡಿ, ಉಪ್ಪು, ನೆನೆಸಿದ ಹೆಸರು ಬೇಳೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಮಿಶ್ರಣಕ್ಕೆ ಹಾಕಿ ಒಂದು ಗಂಟೆ ಬಿಡಿ. ನಂತರ ಚಪಾತಿ ಆಕಾರಕ್ಕೆ ತಟ್ಟಿಕೊಳ್ಳಿ, ಬಳಿಕ ಒಂದು ಬೌಲ್ ಹಾಕಿ ಕಟ್ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಕರಿಯಬೇಕು.

ಇದನ್ನೂ ಓದಿ:
ನಿಪ್ಪಟ್​ ಮಸಾಲ: ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

‘ಮೆಂತ್ಯೆ ಸೊಪ್ಪಿನ ಸ್ಪೆಷಲ್​ ಬಜ್ಜಿ‘ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ರುಚಿ ಸವಿಯಿರಿ

Loading...
Unable to load recommendations.
Follow Us
TV9 Web

TV9 Kannada

Read More