Momos: ಪನೀರ್ ಮೋಮೋಸ್; ಸರಳ ವಿಧಾನದಲ್ಲಿ ಮನೆಯಲ್ಲೇ ಮಾಡಿ ಸವಿಯಿರಿ
ಮೋಮೋಸ್ ಅನ್ನು 20 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಮೋಮೋಸ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಲಾಕ್ಡೌನ್ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ಮೋಮೋಸ್ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಮೋಮೋಸ್ ಅನ್ನು 20 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಮೋಮೋಸ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಪನೀರ್ ಮೋಮೋಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಮೈದಾ ಹಿಟ್ಟು, ಹೂ ಕೋಸು, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕ್ಯಾರೆಟ್, ಪನ್ನೀರ್, ಸ್ವೀಟ್ ಕಾರ್ನ್, ಅಡುಗೆ ಎಣ್ಣೆ, ಕ್ಯಾಪ್ಸಿಕಮ್, ಡಸ್ಟಿಂಗ್ ಪೌಡರ್, ಗರಂ ಮಸಾಲಾ, ಕರಿ ಮೆಣಸಿನ ಪುಡಿ, ಉಪ್ಪು.
ಪನೀರ್ ಮೋಮೋಸ್ ಮಾಡುವ ವಿಧಾನ:
ಮೊದಲು ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಹೂ ಕೋಸು, ಕ್ಯಾರೆಟ್, ಕ್ಯಾಪ್ಸಿಕಮ್, ಸ್ವೀಟ್ ಕಾರ್ನ್, ಕರಿ ಮೆಣಸಿನ ಪುಡಿ, ಪನ್ನೀರ್, ಗರಂ ಮಸಾಲಾ, ಉಪ್ಪು ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಿ. ಬಳಿಕ ಡಸ್ಟಿಂಗ್ ಪೌಡರ್ ಹಾಕಿ ಮೈದಾ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ, ನಂತರ ಅದನ್ನು ತಟ್ಟಿ ಮಧ್ಯದಲ್ಲಿ ತಯಾರಿಸಿದ ಮಿಶ್ರಣವನ್ನು ಹಾಕಿ ಮುಚ್ಚಿ, ಇಡ್ಲಿ ಪಾತ್ರೆಗೆ ಹಾಕಿ 15 ನಿಮಿಷ ಬೇಯಿಸಿಕೊಳ್ಳಿ. ಈಗ ರುಚಿಕರವಾದ ಪನೀರ್ ಮೋಮೋಸ್ ಸವಿಯಲು ಸಿದ್ಧ.
ಇದನ್ನೂ ಓದಿ:
ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
Pizza: ಮನೆಯಲ್ಲಿ ಪಿಜ್ಜಾ ಮಾಡುವುದು ಕಷ್ಟ ಅಂತೀರಾ, ಸರಳ ವಿಧಾನದ ಜತೆ ಮಾಡಿ ಸವಿಯಿರಿ