HP EliteBook Ultra: ಎಚ್​ಪಿ ಪವರ್​ಫುಲ್ ಲ್ಯಾಪ್​ಟಾಪ್ ಹೊಸ ಸರಣಿ ಮಾರುಕಟ್ಟೆಗೆ ಎಂಟ್ರಿ

|

Updated on: Jul 30, 2024 | 11:48 AM

ಹೊಸದಾಗಿ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಎಚ್​ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಎಚ್​ಪಿ ಒಮ್ನಿಬುಕ್ ಎಕ್ಸ್ ಲ್ಯಾಪ್​ಟಾಪ್ , ಎಚ್​ಪಿಯ ಮೊಟ್ಟ ಮೊದಲ ಕೋಪೈಲಟ್+ ಪಿಸಿಗಳಾಗಿವೆ. ಎರಡೂ ಬಗೆಯ ಲ್ಯಾಪ್​ಟಾಪ್​ಗಳಲ್ಲಿ ಸ್ನ್ಯಾಪ್ ಡ್ರಾಗನ್ ಎಕ್ಸ್ ಎಲೈಟ್ ಪ್ರೊಸೆಸರ್ ಬಳಸಲಾಗಿದ್ದು, ಅತ್ಯಂತ ಸುಲಭ ಮತ್ತು ವೇಗದ ಕಾರ್ಯಾಚರಣೆಗೆ ಅನುಕೂಲವಾಗಲಿದೆ.

ದೇಶದ ಕಂಪ್ಯೂಟರ್ ಮತ್ತು ಐಟಿ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಎಚ್​ಪಿ, ಹೊಸ ಸರಣಿಯಲ್ಲಿ ಶಕ್ತಿಶಾಲಿ ಎಐ ಪಿಸಿಗಳನ್ನು ಬಿಡುಗಡೆ ಮಾಡಿದೆ. ದೊಡ್ಡ ಉದ್ದಿಮೆಗಳು, ಸ್ಟಾರ್ಟಪ್ ಮತ್ತು ರೀಟೇಲ್ ಗ್ರಾಹಕರು ಉತ್ತಮ ಕಂಪ್ಯೂಟಿಂಗ್ ಅನುಭವವನ್ನು ಪಡೆಯಬಹುದು ಎಂದು ಎಚ್​ಪಿ ಹೇಳಿದೆ. ಹೊಸದಾಗಿ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಎಚ್​ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಎಚ್​ಪಿ ಒಮ್ನಿಬುಕ್ ಎಕ್ಸ್ ಲ್ಯಾಪ್​ಟಾಪ್ , ಎಚ್​ಪಿಯ ಮೊಟ್ಟ ಮೊದಲ ಕೋಪೈಲಟ್+ ಪಿಸಿಗಳಾಗಿವೆ. ಎರಡೂ ಬಗೆಯ ಲ್ಯಾಪ್​ಟಾಪ್​ಗಳಲ್ಲಿ ಸ್ನ್ಯಾಪ್ ಡ್ರಾಗನ್ ಎಕ್ಸ್ ಎಲೈಟ್ ಪ್ರೊಸೆಸರ್ ಬಳಸಲಾಗಿದ್ದು, ಅತ್ಯಂತ ಸುಲಭ ಮತ್ತು ವೇಗದ ಕಾರ್ಯಾಚರಣೆಗೆ ಅನುಕೂಲವಾಗಲಿದೆ.