ಮುಂದಿನ ತಿಂಗಳೇ ನಾಗರ ಪಂಚಮಿ, ಮುಂಚಿತವಾಗಿಯೇ ಬಂದ ನಾಗಪ್ಪ ನಾಗರ ಕಟ್ಟೆಯಲ್ಲಿ ಮಾಡಿದ್ದೇನು? ವಿಡಿಯೋ ನೋಡಿ
ತೆಲಂಗಾಣದಲ್ಲಿ ಶ್ರೀ ಪಾರ್ವತಿ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ನಾಗದೇವತೆಯ ಪ್ರತಿಮೆಯ ಮೇಲೆ ನಾಗರ ಹಾವೊಂದು ಹರಿದಾಡಿದೆ. ಶಿವನ ಮಹಿಮೆಯನ್ನು ಸಾರುವ ವಿಶೇಷ ಪೂಜೆಯನ್ನು ಭಕ್ತರು ನಡೆಸಿದ್ದಾರೆ. ಆದರೂ, ಹಾವು ಅಲ್ಲಿಂದ ಕದಲಲಿಲ್ಲ. ಇಂತಹ ದೃಶ್ಯಗಳು ಸಿನಿಮಾದಲ್ಲಿ ಕಾಣಸಿಗುತ್ತವೆ ಅಲ್ಲವಾ.
ಮುಂದಿನ ತಿಂಗಳೇ ನಾಗರ ಪಂಚಮಿ (ಆಗಸ್ಟ್ 9 – ಶುಕ್ರವಾರ) . ಈ ಮಧ್ಯೆ ತೆಲಂಗಾಣದ ಪೆಡಪಲ್ಲಿ ಜಿಲ್ಲೆಯ ಶಿವನ ದೇವಸ್ಥಾನವೊಂದರಲ್ಲಿ ಅದ್ಭುತ ಘಟನೆ ನಡೆದಿದೆ. ಹಿಂದೂಗಳು ದೇವತೆಯಾಗಿ ಪೂಜಿಸುವ ನಾಗರ ಹಾವು ನಾಗರ ಕಟ್ಟೆಯಲ್ಲಿ ಪ್ರತ್ಯಕ್ಷವಾಗಿ ಬಹಳ ಸಮಯದವರೆಗೆ ನಾಗ ಮೂರ್ತಿ ಮೇಲಿನಿಂದ ಕದಲದೇ ನಾಟ್ಯವಾಡಿದೆ. ಭಕ್ತರು ದೂರದಿಂದ ತದೇಕಚಿತ್ತದಿಂದ ನಾಗರಕಲ್ಲು ಮತ್ತು ಜೀವಂತ ಹಾವನ್ನು ನೊಡುತ್ತಾ ನಿಂತುಬಿಟ್ಟಿದ್ದಾರೆ. ದೇವರ ಮಹಿಮೆ ಎಂದು ಹಾಡಿ ಹೊಗಳಿದ್ದಾರೆ. ಆದರೆ ಅವರಲ್ಲೊಬ್ಬ ಎಚ್ಚೆತ್ತು ಹಾವು ಹಿಡಿಯುವ ಯುವಕನಿಗೆ ಮಾಹಿತಿ ನೀಡಿದ್ದಾರೆ. ಆತ ಸ್ಥಳಕ್ಕೆ ಬಂದವನೇ ಹಾವನ್ನು ಸಲೀಸಾಗಿ ಹಿಡಿದು ಅದನ್ನು ಕರೆದೊಯ್ದಿದ್ದಾನೆ.
ಪೆದ್ದಪಲ್ಲಿ ಜಿಲ್ಲೆಯ ಒಡೆಲಾದಲ್ಲಿರುವ ಶ್ರೀ ಪಾರ್ವತಿ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ನಾಗದೇವತೆಯ ಪ್ರತಿಮೆಯ ಮೇಲೆ ನಾಗರ ಹಾವೊಂದು ಹರಿದಾಡಿದೆ. ಶಿವನ ಮಹಿಮೆಯನ್ನು ಸಾರುವ ವಿಶೇಷ ಪೂಜೆಯನ್ನು ಭಕ್ತರು ನಡೆಸಿದ್ದಾರೆ. ಆದರೂ, ಹಾವು ಅಲ್ಲಿಂದ ಕದಲಲಿಲ್ಲ. ಇಂತಹ ದೃಶ್ಯಗಳು ಸಿನಿಮಾದಲ್ಲಿ ಕಾಣಸಿಗುತ್ತವೆ ಅಲ್ಲವಾ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ