Hubballi Rain: ಮಟ ಮಟ ಮಧ್ಯಾಹ್ನ ಸುರಿದ ಧಾರಾಕಾರ ಮಳೆ: ಧರೆಗುರುಳಿದ ಬೃಹತ್ ಮರಗಳು

Edited By:

Updated on: May 09, 2023 | 4:16 PM

Hubballi Rain Effects: ಹುಬ್ಬಳ್ಳಿಯಲ್ಲಿ ಸೋಮವಾರ ಮಟ ಮಟ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ವಾಣಿಜ್ಯ ನಗರದಲ್ಲಿ ಅವಾಂತರ ಸೃಷ್ಟಿಯಾಗಿವೆ. ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.

ಹುಬ್ಬಳ್ಳಿ: ಬಂಗಾಲಕೊಲ್ಲಿಯಲ್ಲಿ ಸುಳಿಗಾಳಿ ಉಂಟಾದ ಪರಿಣಾಮ ಬೆಂಗಳೂರು (Bangalore Rain) ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ಸೋಮವಾರ ಮಟ ಮಟ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ವಾಣಿಜ್ಯ ನಗರದಲ್ಲಿ ಅವಾಂತರ ಸೃಷ್ಟಿಯಾಗಿವೆ. ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಒಂದು ಕಡೆ ಧಾರಾಕಾರ ಮಳೆಗೆ ದಾಜಿಬಾನ್ ಪೇಟೆಯಲ್ಲಿ ಬೈಕ್​ಗಳು ಕೊಚ್ಚಿಹೋದರೆ, ನೀರಿನಲ್ಲಿ ಬೈಕ್ ತೇಲಿಹೋಗದಂತೆ ಬೈಕ್ ಸವಾರರು ಹಗ್ಗ ಕಟ್ಟಿದ್ದಾರೆ. ಮತ್ತೊಂದೆಡೆ ನಗರದ ಕೇಶ್ವಾಪುರ ರಸ್ತೆಯಲ್ಲಿ ಬೃಹತ್ ಮರಗಳು ಧರೆಗುರುಳಿವೆ. ದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರಗಳು ನೆಲಕ್ಕುರುಳಿದ ಹಿನ್ನೆಲೆ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.    

 

Published on: May 09, 2023 04:15 PM