LPG ಕೊರತೆ: ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಸಿಲಿಂಡರ್ ದರ 4 ಸಾವಿರ ರೂಪಾಯಿಗೆ ಏರಿಕೆ?
ಹುಬ್ಬಳ್ಳಿಯ ಹೋಟೆಲ್ ಉದ್ಯಮವು ತೀವ್ರ LPG ಸಿಲಿಂಡರ್ ಕೊರತೆಯಿಂದ ತತ್ತರಿಸಿದೆ. ಮಾಲೀಕರು 4,000-5,000 ನೀಡಲು ಸಿದ್ಧವಿದ್ದರೂ ಸಿಲಿಂಡರ್‌ಗಳು ಲಭ್ಯವಿಲ್ಲ. ಇದರಿಂದ ದೋಸೆ, ಪೂರಿ ಮುಂತಾದ ಖಾದ್ಯಗಳ ತಯಾರಿಕೆಯನ್ನು ನಿಲ್ಲಿಸಿ, ಕಾರ್ಮಿಕರನ್ನು ಕಡಿತಗೊಳಿಸುವಂತಾಗಿದೆ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾರ್ಮಿಕರು ತಮ್ಮ ಮುಂದಿನ ಜೀವನದ ಬಗ್ಗೆ ಆತಂಕಗೊಂಡಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 11: ಹೋಟೆಲ್ ಉದ್ಯಮವು ತೀವ್ರ LPG ಸಿಲಿಂಡರ್ ಕೊರತೆಯಿಂದ ತತ್ತರಿಸಿದೆ. ವಾಣಿಜ್ಯ ಸಿಲಿಂಡರ್‌ಗಳು ಲಭ್ಯವಿಲ್ಲದೆ ಹೋಟೆಲ್ ಮಾಲೀಕರು ಪರದಾಡುತ್ತಿದ್ದಾರೆ. ಒಂದು ಸಿಲಿಂಡರ್‌ಗೆ 4,000-5,000 ನೀಡಲು ಸಿದ್ಧರಿದ್ದರೂ ಸಿಲಿಂಡರ್‌ಗಳು ಸಿಗುತ್ತಿಲ್ಲ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಈ ಸಮಸ್ಯೆಯಿಂದಾಗಿ ಹೋಟೆಲ್‌ಗಳು ದೋಸೆ, ಪೂರಿ ಸೇರಿದಂತೆ ಹಲವು ಖಾದ್ಯಗಳ ತಯಾರಿಕೆಯನ್ನು ನಿಲ್ಲಿಸಿವೆ. ಸಿಲಿಂಡರ್ ಕೊರತೆಯು ಕಾರ್ಮಿಕರ ಬದುಕಿನ ಮೇಲೆ ನೇರ ಪರಿಣಾಮ ಬೀರಿದೆ. ಹಲವು ಹೋಟೆಲ್‌ಗಳು ಈಗಾಗಲೇ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿವೆ, ಇನ್ನೂ ಕೆಲವು ಹೋಟೆಲ್‌ಗಳು ಮುಚ್ಚುವ ಭೀತಿಯಲ್ಲಿವೆ. ಇದರಿಂದ ಪ್ರತಿದಿನ ದುಡಿದು ಜೀವನ ಸಾಗಿಸುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Mar 11, 2026 11:39 AM
Loading...
Unable to load recommendations.
Follow Us
