ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ

Edited By:

Updated on: Oct 06, 2026 | 2:30 PM

ಹುಬ್ಬಳ್ಳಿಯ ಜೈನ ಮಂದಿರಗಳಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಗಬ್ಬೂರಿನ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಮತ್ತೊಮ್ಮೆ ದುಸ್ಸಾಹಸ ನಡೆದಿದೆ. ಕಳ್ಳರು ಬೆಳ್ಳಿ ಆಭರಣ ಹಾಗೂ ಹಣ ಕದ್ದು, ಜೈನ ಮುನಿಗಳ ಮೂರ್ತಿಯ ಕಿರೀಟ ಧರಿಸಿ ನೃತ್ಯ ಮಾಡಿ ಅಪಹಾಸ್ಯ ಮಾಡಿದ್ದಾರೆ. ಇದು ಸಮುದಾಯದಲ್ಲಿ ಆತಂಕ ಮೂಡಿಸಿದ್ದು, ತಪ್ಪಿತಸ್ಥರ ಪತ್ತೆಗೆ ಜೈನ ಮುಖಂಡರು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ, ಅಕ್ಟೋಬರ್ 6: ಹುಬ್ಬಳ್ಳಿಯಲ್ಲಿ ಜೈನ ಮಂದಿರಗಳಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಗಬ್ಬೂರಿನ ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಎರಡನೇ ಬಾರಿಗೆ ಕಳ್ಳತನ ನಡೆದಿದೆ. ಈ ಘಟನೆಯು ಜೈನ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ರಾತ್ರಿ ಸುಮಾರು ಎರಡು ಗಂಟೆಗೆ ಮೂವರು ಮುಸುಕುಧಾರಿ ಕಳ್ಳರು ಮಂದಿರದ ಬಾಗಿಲು ಮುರಿದು ಒಳನುಗ್ಗಿದ್ದಾರೆ. ದೇವಸ್ಥಾನದ ಜೈನ ಮೂರ್ತಿಗಳಿಗೆ ನಮಸ್ಕರಿಸಿದ ಓರ್ವ ಕಳ್ಳ, ನಂತರ ಜೈನ ಮುನಿಗಳ ತಲೆ ಮೇಲಿದ್ದ ಕಿರೀಟವನ್ನು ತೆಗೆದು ತನ್ನ ತಲೆ ಮೇಲೆ ಧರಿಸಿ ನೃತ್ಯ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳರು ಬೆಳ್ಳಿಯ ಆಭರಣಗಳು, ಹುಂಡಿಯ ಹಣ ಮತ್ತು ಅಲ್ಮಾರಿಯಲ್ಲಿದ್ದ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಹಣ ಮತ್ತು ಆಭರಣಗಳನ್ನು ಕದ್ದೊಯ್ದಿದ್ದಾರೆ.

ಬೆಳಗ್ಗೆ ಘಟನೆ ಬೆಳಕಿಗೆ ಬಂದ ನಂತರ ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸಿಪಿಐ ಎಸ್.ಆರ್. ನಾಯಕ್ ಮತ್ತು ಪಿಎಸ್ಐ ರವಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರ ತಂಡವೂ ಕೂಡ ಪತ್ತೆ ಕಾರ್ಯದಲ್ಲಿ ತೊಡಗಿದೆ. ಈ ಮಂದಿರದಲ್ಲಿ 2025ರಲ್ಲಿಯೂ ಕಳ್ಳತನ ನಡೆದಿತ್ತು ಎಂದು ತಿಳಿದುಬಂದಿದೆ. ಪದೇ ಪದೇ ಜೈನ ಮಂದಿರಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಕಳ್ಳರನ್ನು ಶೀಘ್ರವೇ ಪತ್ತೆ ಮಾಡುವಂತೆ ಜೈನ ಮುಖಂಡರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More