ಹುಬ್ಬಳ್ಳಿ ಲವ್ ಜಿಹಾದ್ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ವಿಡಿಯೋ ಇರೋದು ನಿಜ, ಆದ್ರೆ… ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿ!

Edited By:

Updated on: Apr 04, 2026 | 8:16 AM

ಹುಬ್ಬಳ್ಳಿಯ ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ಸಮೀರ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾನೆ. ವಿಡಿಯೋ ಇರುವುದು ನಿಜವಾದರೂ, ಅದನ್ನು ತಾನು ಮಾಡಿಲ್ಲ, ಬದಲಾಗಿ ಹುಡುಗಿಯೇ ರೆಕಾರ್ಡ್ ಮಾಡಿರುವುದಾಗಿ ಹೇಳಿದ್ದಾನೆ. ಪ್ರಜ್ಞೆ ತಪ್ಪುವ ಔಷಧಿ ನೀಡಿದ್ದರೆ ಹುಡುಗಿ ಪ್ರಜ್ಞೆ ಕಳೆದುಕೊಳ್ಳಬೇಕಿತ್ತು, ಆದರೆ ತಾನೇ ಪ್ರಜ್ಞಾಹೀನನಾಗಿದ್ದೆ ಎಂದು ಸಮೀರ್ ಸ್ಪಷ್ಟಪಡಿಸಿದ್ದಾನೆ.

ಹುಬ್ಬಳ್ಳಿ, ಏಪ್ರಿಲ್ 4: ಹುಬ್ಬಳ್ಳಿಯಲ್ಲಿನ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸಮೀರ್ ತನ್ನ ಮೇಲಿನ ಆರೋಪಗಳನ್ನು ಬಲವಾಗಿ ಅಲ್ಲಗಳೆದಿದ್ದಾನೆ. ಪ್ರಕರಣದ ಮಧ್ಯೆ ವೈರಲ್ ಆಗಿರುವ ವಿಡಿಯೋದ ಬಗ್ಗೆ ಮಾತನಾಡಿದ ಸಮೀರ್, ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ತಾನು ಚಿತ್ರೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಈ ವಿಡಿಯೋವನ್ನು ಯಾರು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲು ತನ್ನ ಮತ್ತು ಆರೋಪಿಯಾದ ಹುಡುಗಿಯ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುವಂತೆ ಸಮೀರ್ ಆಗ್ರಹಿಸಿದ್ದಾನೆ. ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿದ್ದರೆ, ಹುಡುಗಿ ಪ್ರಜ್ಞೆ ಕಳೆದುಕೊಳ್ಳಬೇಕಿತ್ತು. ಆದರೆ, ನಿಜವಾಗಿ ಪ್ರಜ್ಞೆ ಕಳೆದುಕೊಂಡಿದ್ದು ನಾನೇ, ಹುಡುಗಿಯಲ್ಲ ಎಂದು ಸಮೀರ್ ಹೇಳಿಕೆ ನೀಡಿದ್ದಾನೆ. ವಿಡಿಯೋವನ್ನು ಆ ಹುಡುಗಿಯೇ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವುದಾಗಿ ಸಮೀರ್ ಆರೋಪಿಸಿದ್ದಾನೆ.

ಪೂರ್ಣ ವಿವರಗಳಿಗೆ ಓದಿ: ಹುಬ್ಬಳ್ಳಿಯಲ್ಲೊಂದು ಲವ್ ಜಿಹಾದ್: ಜಿಮ್ ಟ್ರೈನರ್​ನ​​​​​​​​​ ಕಾಮುಕ ಮುಖ ಬಿಚ್ಚಿಟ್ಟ ಯುವತಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us