ಜಿಎಸ್‌ಟಿ ಹೊರೆ ಇಳಿಕೆ; ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು

Updated on: Sep 22, 2025 | 5:08 PM

ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಇಂದಿನಿಂದ ಪರಿಷ್ಕೃತ ಜಿಎಸ್‌ಟಿ ದರಗಳು ಜಾರಿಯಾಗಿದ್ದು, ಈ ಮೂಲಕ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ದಸರಾ ಗಿಫ್ಟ್‌ ಕೊಟ್ಟಿದೆ. ದಿನ ಬಳಕೆ ವಸ್ತುಗಳು, ಬೈಕ್‌ ಮತ್ತು ಕಾರ್‌ಗಳ ಬೆಲೆ ಭಾರೀ ಇಳಿಕೆಯಾಗಿದ್ದು, ಈ ಜಿಎಸ್‌ಟಿ ದರ ಇಳಿಕೆಯಾಗುತ್ತಿದ್ದಂತೆ ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಒಂದೇ ಗಂಟೆಯಲ್ಲಿ 5 ಬೈಕ್‌ ಕಾಯ್ದಿರಿಸಿದ್ದಾರೆ.

ಹುಬ್ಬಳ್ಳಿ, ಸೆಪ್ಟೆಂಬರ್‌ 22: ಇಂದಿನಿಂದ ನವರಾತ್ರಿ ಆರಂಭವಾಗಿವಾಗಿದ್ದು, ನವರಾತ್ರಿಯ ಮೊದಲ ದಿನವೇ ದೇಶದ ಜನತೆಗೆ ಭರ್ಜರಿ ದಸರಾ ಗಿಫ್ಟ್‌ ಸಿಕ್ಕಂತಾಗಿದೆ. ಇಂದಿನಿಂದ ಕೇಂದ್ರ ಸರ್ಕಾರದ ಜಿಎಸ್‌ಟಿ 2.0  (GST) ಜಾರಿಯಾಗಿದ್ದು, ದಿನ ಬಳಕೆಯ ವಸ್ತುಗಳು, ಬೈಕ್‌ ಮತ್ತು ಕಾರುಗಳ ಬೆಲೆ ಭಾರೀ ಇಳಿಕೆಯಾಗಿದೆ. ಇನ್ನೂ ಜಿಎಸ್‌ಟಿ  ದರ ಇಳಿಕೆಯಾಗುತ್ತಿದ್ದಂತೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಬೈಕ್‌ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.  ಒಂದೇ ಗಂಟೆಯಲ್ಲಿ ಗ್ರಾಹಕರು 5 ಬೈಕ್‌ಗಳನ್ನು ಗ್ರಾಹಕರು ಬುಕಿಂಗ್‌ ಮಾಡಿದ್ದು, ಜಿಎಸ್‌ಟಿ ದರ ಇಳಿಕೆಯಾಗಿದ್ದಕ್ಕೆ ಜನ ಖುಷಿಪಟ್ಟಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ