ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ತ್ರಿಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತಾ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಡ್ರೈವ್ (ಪ್ರಸಾದ್) ಯೋಜನೆಯಡಿಯಲ್ಲಿ ಮಾತಾಬರಿಯಲ್ಲಿ 'ಮಾತಾ ತ್ರಿಪುರ ಸುಂದರಿ ದೇವಸ್ಥಾನ ಸಂಕೀರ್ಣ'ದ ಅಭಿವೃದ್ಧಿ ಕಾರ್ಯವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರ ಪಟ್ಟಣದಲ್ಲಿರುವ ಪ್ರಾಚೀನ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.
ತ್ರಿಪುರ, ಸೆಪ್ಟೆಂಬರ್ 22: ನವರಾತ್ರಿಯ ಮೊದಲ ದಿನವಾದ ಇಂದು ತ್ರಿಪುರದ ಉದಯಪುರದಲ್ಲಿರುವ ಮಾತಾ ತ್ರಿಪುರ ಸುಂದರಿ ದೇವಾಲಯಕ್ಕೆ (Mata Tripura Sundari temple) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Modi) ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ದೇವಾಲಯವನ್ನು 51 ಶಕ್ತಿ ಪೀಠಗಳಲ್ಲಿ ಒಂದೆಂದು ಪೂಜಿಸಲಾಗುತ್ತದೆ. ಸರ್ಕಾರದ ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಡ್ರೈವ್ (ಪ್ರಸಾದ್) ಯೋಜನೆಯಡಿ ಈ ದೇವಸ್ಥಾನದ ಪುನರಾಭಿವೃದ್ಧಿಯನ್ನು ಕೈಗೊಳ್ಳಲಾಗಿತ್ತು. ಈ ಯೋಜನೆಯಲ್ಲಿ ದೇವಾಲಯದ ಆವರಣದ ಮಾರ್ಪಾಡುಗಳು, ಹೊಸ ಮಾರ್ಗಗಳು ಮತ್ತು ನವೀಕರಿಸಿದ ಪ್ರವೇಶದ್ವಾರಗಳು ಸೇರಿವೆ. ಈ ಯೋಜನೆಯ ಉದ್ದೇಶ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವುದು. ಇದು ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

