[lazy-load-videos-and-sticky-control id=”jstA12NMcu8″] ಹುಬ್ಬಳ್ಳಿ: ಅವಳಿ ನಗರ ಎಂದು ಕರೆಯುವ ಹುಬ್ಬಳ್ಳಿ-ಧಾರವಾಡದಲ್ಲಿ ಅಮಾನವೀಯ ಘಟನೆ ನಡೆದಿದೆ. ಹೊಟ್ಟೆ ನೋವಿನಿಂದ ದಾಖಲಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಡುತ್ತಿದ್ದಂತೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ ಆಸ್ಪತ್ರೆ ಹೊರದಬ್ಬಿದೆ. ಆಸ್ಪತ್ರೆಯವರ ಅಮಾನವೀಯತೆಗೆ ಸೋಂಕಿತ ವ್ಯಕ್ತಿ ಉಸಿರು ಚೆಲ್ಲಿದ್ದಾನೆ. ಆ ಮೃತದೇಹ ಶಿಫ್ಟ್ ಮಾಡೋದ್ರಲ್ಲೂ ಪಾಲಿಕೆ ಸಿಬ್ಬಂದಿ ದಂಧೆ ಶುರು ಮಾಡಿದೆ?
ಜೂ.8ರಂದು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಹೊಟ್ಟೆ ನೋವು ಎಂದು ಬಳ್ಳಾರಿ ಜಿಲ್ಲೆ ಹೊಸಪೇಟೆ ಮೂಲದ 66 ವರ್ಷದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ರು. ಜೂನ್ 17ರಂದು ವೈದ್ಯರು ಆ ವ್ಯಕ್ತಿಗೆ ಆಪರೇಷನ್ ಮಾಡಿದ್ದರು. ಆಪರೇಷನ್ ಬಳಿಕ ವ್ಯಕ್ತಿಗೆ ಕೆಮ್ಮು, ನೆಗಡಿ ಉಲ್ಬಣಗೊಂಡಿತ್ತು. ಹೀಗಾಗಿ ಕೊರೊನಾ ಪರೀಕ್ಷೆಗೆ ಗಂಟಲು ದ್ರವ ಕಳುಹಿಸಲಾಗಿತ್ತು.
ಹುಬ್ಬಳ್ಳಿಯ ಎನ್.ಎಂ ಆರ್ ಲ್ಯಾಬ್ನಿಂದ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವ ರಿಪೋರ್ಟ್ ಬಂದಿದೆ. ಪಾಸಿಟಿವ್ ಬರ್ತಿದ್ದಂತೆಯೇ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಬಳಿಕ ಧಾರವಾಡದ ಖಾಸಗಿ ಆಸ್ಪತ್ರೆಗೆ ಸೋಂಕಿತ ದಾಖಲಾಗಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಗ್ಗೆ 10:35ಕ್ಕೆ ಸೋಂಕಿತ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. ವ್ಯಕ್ತಿ ಬಗ್ಗೆ ಮಾಹಿತಿ ನೀಡಿದ್ರೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸುತ್ತಿದೆ.
ಮೃತದೇಹ ಶಿಫ್ಟ್ ಮಾಡೋದ್ರಲ್ಲೂ ದಂಧೆ
ಇನ್ನು ಇಷ್ಟೆಲ್ಲ ಆದ ಮೇಲೆ ಈಗ ಮೃತದೇಹದ ವಿಷಯದಲ್ಲೂ ಪಾಲಿಕೆ ಸಿಬ್ಬಂದಿ ದಂಧೆ ಶುರು ಮಾಡಿದ್ದಾರೆ. ಮೃತದೇಹವನ್ನು ಕೊಂಡೊಯ್ಯಲು 60 ಸಾವಿರ ಡಿಮ್ಯಾಂಡ್ ಮಾಡಿದ್ದಾರಂತೆ. ಹು-ಧಾರವಾಡ ಪಾಲಿಕೆ ಸಿಬ್ಬಂದಿ ಬಾಕ್ಸ್ನಲ್ಲಿ ಮೃತದೇಹ ಹೊಸಪೇಟೆಗೆ ಕೊಂಡೊಯ್ಯಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಅಧಿಕಾರಿಗಳನ್ನ ಸಂಪರ್ಕಿಸಿದ್ರೂ ಅವರು ಕ್ಯಾರೆ ಅಂತಿಲ್ಲ. ಹೀಗಾಗಿ ಹಣ ಹೊಂದಿಸಲು ಮೃತ ಸೋಂಕಿತನ ಮಕ್ಕಳು ಪರದಾಡಿದ್ದಾರೆ.
Published On - 12:20 pm, Wed, 8 July 20