ಸೋಮವಾರದಂದು ಫೇಸ್​ಬುಕ್​​ ಕಳೆದುಕೊಂಡಿದ್ದನ್ನು ಟೆಲಿಗ್ರಾಮ್ ಫ್ಲಾಟ್​ಫಾರ್ಮ್​ ಪಡೆದುಕೊಂಡಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 07, 2021 | 10:25 PM

ಅಮೆರಿಕನಲ್ಲಿ ಜನ 9ಟು5ಮ್ಯಾಕ್ ಮತ್ತು ಐಮೆಸೇಜ್ ಫ್ಲಾಟ್​ಫಾರ್ಮ್ ಗಳನ್ನು ಬಳಸುತ್ತಾರಾದರೂ, ಬ್ರೆಜಿಲ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಜನ ವಾಟ್ಸ್ಯಾಪ್ ಬಳಸುವುದನ್ನು ಇಷ್ಟಪಡುತ್ತಾರೆ.

ಒಬ್ಬನ ಭಾರಿ ನಷ್ಟ ಮತ್ತೊಬ್ಬನಿಗೆ ಭಾರಿ ಲಾಭ. ಕಾರ್ಪೋರೇಟ್ ವಿಶ್ವದಲ್ಲಿ ಆಗೋದೇ ಹಾಗೆ. ಸೋಮವಾರ ಫೇಸ್​ಬುಕ್​ ಮತ್ತು ಅದರ ಎರಡು ಪ್ಲಾಟ್​ಫಾರ್ಮ್​ಗಳಾದ ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ಯಾಪ್ ಸೇವೆಗಳಲ್ಲಿ 6 ಗಂಟೆ ವ್ಯತ್ಯಯ ಉಂಟಾಗಿದ್ದರಿಂದ ಅದರ ಸಿಈಓ ಮಾರ್ಕ್ ಝಕರ್​ಬರ್ಗ್​ ರೂ. 52,000 ಕೋಟಿ ಕಳೆದುಕೊಂಡಿದ್ದಷ್ಟೇ ಅಲ್ಲ ಅದರೊಂದಿಗೆ ಅಪಾರ ಪ್ರಮಾಣದ ಗ್ರಾಹಕರನ್ನೂ ಕಳೆದುಕೊಂಡಿದ್ದಾರೆ. ಫೇಸ್​ಬುಕ್​​​ ಪ್ರತಿಸ್ಪರ್ಧಿ ಟೆಲಿಗ್ರಾಮ್ ಆ ಒಂದು ದಿನದ ಅವಧಿಯಲ್ಲಿ ಸುಮಾರು 7 ಕೋಟಿ ಹೊಸ ಗ್ರಾಹಕರನ್ನು ಸಂಪಾದಿಸಿಕೊಂಡಿದೆಯಂತೆ!

ಟೆಲಿಗ್ರಾಮ್ ಫ್ಲಾಟ್​ಫಾರ್ಮ್​​ ಸಿಈಒ ಪವೆಲ್ ಡುರೊವ್ ಅವರು ತಮ್ಮ ಚ್ಯಾನೆಲ್​ನಲ್ಲಿ  ‘ಬೇರೆ ಫ್ಲಾಟ್​ಫಾರ್ಮ್ ಗಳ ಸುಮಾರು 70 ಮಿಲಿಯನ್ ನಿರಾಶ್ರಿತರನ್ನು ನಾವು ಒಂದು ದಿನದಲ್ಲಿ ಬರಮಾಡಿಕೊಂಡಿದ್ದೇವೆ,’ ಎಂದು ಹೇಳಿದ್ದು ಗ್ರಾಹಕರ ನೋಂದಣಿ ಕಾರ್ಯವನ್ನು ಭರದಿಂದ ಮಾಡಿರುವ ತಮ್ಮ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

‘ನಮ್ಮ ಫ್ಲಾಟ್​ಫಾರ್ಮ್ ಕಂಡ ಅಭೂತಪೂರ್ವ ಬೆಳವಣಿಗೆಯನ್ನು ಸಿಬ್ಬಂದಿ ನಿರ್ವಹಿಸಿದ ಬಗ್ಗೆ ನನಗೆ ಹೆಮ್ಮೆಯೆನಿಸುತ್ತಿದೆ. ಯಾಕೆಂದರೆ ಹೊಸ ಗ್ರಾಹಕರ ನೋಂದಣಿಗಳನ್ನು ಮಾಡಿಕೊಳ್ಳುವಾಗ ಹಳೆ ಗ್ರಾಹಕರಿಗೆ ಒದಗಿಸುತ್ತಿದ್ದ ಸೇವೆಯಲ್ಲಿ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಲಾಯಿತು. ಆದಾಗ್ಯೂ ಅಮೇರಿಕ ಖಂಡಗಳಲ್ಲಿನ ಮಿಲಿಯನ್ಗಟ್ಟಲೆ ಗ್ರಾಹಕರಿಗೆ ಸೇವೆಯ ವೇಗ ಕುಂಠಿತಗೊಂಡಿರಬಹುದಾದ ಸಾಧ್ಯತೆಯಿದೆ. ಯಾಕೆಂದರೆ, ಈ ಭಾಗಗಳಿಂದ ಲಕ್ಷಾಂತರ ಹೊಸ ಗ್ರಾಹಕರು ನಮ್ಮ ಫ್ಲಾಟ್​ಫಾರ್ಮ್​ಗೆ ದೌಡಾಯಿಸಿದರು,’ ಎಂದು ಡುರೋವ್ ಹೇಳಿದ್ದಾರೆ.

ಹಾಗೆ ನೋಡಿದರೆ, ಅಮೆರಿಕನಲ್ಲಿ ಜನ 9ಟು5ಮ್ಯಾಕ್ ಮತ್ತು ಐಮೆಸೇಜ್ ಫ್ಲಾಟ್​ಫಾರ್ಮ್ ಗಳನ್ನು ಬಳಸುತ್ತಾರಾದರೂ, ಬ್ರೆಜಿಲ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಜನ ವಾಟ್ಸ್ಯಾಪ್ ಬಳಸುವುದನ್ನು ಇಷ್ಟಪಡುತ್ತಾರೆ. ಫೇಸ್​ಬುಕ್​​ನಲ್ಲಿ ವ್ಯತ್ಯಯ ಉಂಟಾದಾಗಲೆಲ್ಲ ಜನ ಟೆಲಿಗ್ರಾಮ್ ವಲಸೆ ಹೋಗುತ್ತಾರೆ. ಆದರೆ, ಹೀಗೆ ಕೋಟಟಿಗಟ್ಟಲೆ ಜನರ ಸಾಮೂಹಿಕ ವಲಸೆ ಹಿಂದೆ ಯಾವತ್ತೂ ಘಟಿಸಿರಲಿಲ್ಲ.

ಇದನ್ನೂ ಓದಿ: Viral Video: ಬಟ್ಟೆ ತೊಳೆಯಲು ದೇಸಿ ವಾಶಿಂಗ್​ ಮಷೀನ್​ ಕಂಡುಹಿಡಿದ ವಿದ್ಯಾರ್ಥಿ! ವಿಡಿಯೋ ಮಿಸ್​ ಮಾಡ್ಕೊಳ್ಬೇಡಿ