ರಾಮನಗರ: ಮಾನವೀಯತೆ ಮೆರೆದ ಪೊಲೀಸ್ ಪೇದೆಗೆ ಮೆಚ್ಚುಗೆ
ರಾಮನಗರದ ತಾವರೆಕೆರೆ ಬಳಿ ಪಾರ್ಶ್ವವಾಯು ಪೀಡಿತ ಅಪ್ಸರ್ ಪಾಷ ಅವರನ್ನು ಪೊಲೀಸ್ ಪೇದೆ ಮೈಲಾರಿ ಕಂಡರು. ಅಪ್ಸರ್ ಪಾಷರನ್ನು ಮೈಲಾರಿ ಅವರು ಸ್ವಂತ ಖರ್ಚಿನಲ್ಲಿ ಅವರ ಮನೆಗೆ ಕಳುಹಿಸಿದರು. ಈ ಮಾನವೀಯ ಕಾರ್ಯಕ್ಕೆ ಪೊಲೀಸ್ ಪೇದೆ ಮೈಲಾರಿ ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದು ಪೊಲೀಸರ ಸಹಾಯಕ ಸ್ವಭಾವಕ್ಕೆ ಒಳ್ಳೆಯ ಉದಾಹರಣೆ.
ರಾಮನಗರ, ಮಾರ್ಚ್ 31: ಪೊಲೀಸರೆಂದರೇ ಮೂಗು ಮುರಿಯುವವರೇ ಹೆಚ್ಚು. ಆದರೆ, ರಾಮನಗರದ ಈ ಪೊಲೀಸ್ ಪೇದೆಯ ಮಾನವೀಯತೆ ಕಾರ್ಯಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಾರ್ಶ್ವವಾಯು ಪೀಡಿತ ಮುಸ್ಲಿಂ ವ್ಯಕ್ತಿ ವಾಪಸ್ ಕುಟುಂಬಸ್ಥರನ್ನು ಸೇರುವ ಹಾಗೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿ ರವಿವಾರ (ಮಾ.30) ಬೆಂಗಳೂರು ಬೊಮ್ಮನಹಳ್ಳಿ ನಿವಾಸಿ, ಪಾರ್ಶ್ವವಾಯು ಪೀಡಿತ ಅಪ್ಸರ್ ಪಾಷ (60) ಅವರನ್ನು ತಾವರೆಕೆರೆ ಪೊಲೀಸ್ ಠಾಣೆ ಸಿಬ್ಬಂದಿ ಮೈಲಾರಿ ಗಮನಿಸಿದ್ದಾರೆ. ಬಳಿಕ, ಪೊಲೀಸ್ ಪೇದೆ ಮೈಲಾರಿ ಅವರನ್ನು ವಿಚಾರಿಸಿದಾಗ ಕುಟುಂಬಸ್ಥರು ತನ್ನನ್ನು ಇಲ್ಲಿ ಬಿಟ್ಟು ಹೋಗಿರುವುದಾಗಿ ಅಪ್ಸರ್ ಪಾಷ ಹೇಳಿದ್ದಾರೆ. ನಂತರ, ಪೊಲೀಸ್ ಪೇದೆ ಮೈಲಾರಿ ಅವರು ಅಪ್ಸರ್ ಪಾಷ ವಿಳಾಸ ಪತ್ತೆ ಹಚ್ಚಿ, ಸ್ವಂತ ದುಡ್ಡು ಕೊಟ್ಟು ಆಟೋದಲ್ಲಿ ಮನೆಗೆ ಕಳುಹಿಸಿದ್ದಾರೆ. ಪೊಲೀಸ್ ಪೇದೆ ಮೈಲಾರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Loading...
Unable to load recommendations.
Follow Us