ಶಿವಕುಮಾರ್ ಅದೇನು ಬಿಚ್ಚಿಡುತ್ತಾರೋ ಬಿಚ್ಚಿಡಲಿ, ತಡವಾದರೆ ಮತ್ತೇನಾದರೂ ಆಗಬಹುದು: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ

Updated on: Oct 21, 2023 | 5:51 PM

20-30 ವರ್ಷಗಳಿಂದ ಲೂಟಿ ಮಾಡ್ತಾನೇ ಇದ್ದಾರೆ, ಅವರು ರಾಜಕೀಯಕ್ಕೆ ಬಂದಿದ್ದೇ ಬಂಧಿಖಾನೆ ಮಂತ್ರಿಯಾಗಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ಶಿವಕುಮಾರ್ ತನ್ನ ವಿರುದ್ಧ ಏನಾದರೂ ಮಾಡೋದಿದ್ರೆ ಬೇಗ ಮಾಡಲಿ, ತಡವಾದರೆ ಬೇರೇನಾದರೂ ಸಂಭವಿಸೀತು ಅಂತ ಕುಮಾರಸ್ವಾಮಿ ಹೇಳಿದ್ದು ಉಪ ಮುಖ್ಯಮಂತ್ರಿಗೆ ಮತ್ತಷ್ಟು ವಿಪತ್ತು ಕಾದಿದೆ ಅಂತ ಎಚ್ಚರಿಕೆ ನೀಡಿದ ಹಾಗಿತ್ತು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನೇರವಾಗಿ (HD Kumaraswamy) ಡಿಕೆ ಶಿವಕುಮಾರ್ (DK Shivakumar) ಅವರನ್ನು ಟಾರ್ಗೆಟ್ ಮಾಡಿ ಮಾತಾಡಿದರು. ಅಕ್ರಮ ಆದಾಯ ಪ್ರಕರಣದಲ್ಲಿ (disproportionate assets case) ಶಿವಕುಮಾರ್ ಅವರಿಗೆ ಹೈಕೋರ್ಟ್ ನಲ್ಲಿ ಹಿನ್ನಡೆಯಾದ ಬಳಿಕ ಕುಮಾರಸ್ವಾಮಿ ಹೆಚ್ಚು ಹುರುಪಿನಲ್ಲಿದ್ದಾರೆ ಅನ್ನೊದು ಸುಳ್ಳಲ್ಲ. ಕುಮಾರಸ್ವಾಮಿಯವರ ವಿಷಯಗಳನ್ನು ಬಿಚ್ಚಿಡಬೇಕಾದೀತು ಎಂದು ಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ ಅದೇನು ಬಿಚ್ಚಿಡುತ್ತಾರೋ ಬಿಚ್ಚಲಿ, ನಾವು ಅದ್ಕಕಾಗಿ ಕಾಯ್ತ್ತಾ ಇದ್ದೀವಿ ಎಂದು ಅವರು ಹೇಳಿದರು. ಲೂಟಿ ಮಾಡೋದನ್ನು ನಿಲ್ಲಿಸುವಂತೆ ಎರಡು ತಿಂಗಳಿಂದ ಬುದ್ದಿವಾದ ಹೇಳಿದರೂ ಅವರಿಗೆ ಆರ್ಥವಾಗಿಲ್ಲ, 20-30 ವರ್ಷಗಳಿಂದ ಲೂಟಿ ಮಾಡ್ತಾನೇ ಇದ್ದಾರೆ, ಅವರು ರಾಜಕೀಯಕ್ಕೆ ಬಂದಿದ್ದೇ ಬಂಧಿಖಾನೆ ಮಂತ್ರಿಯಾಗಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ಶಿವಕುಮಾರ್ ತನ್ನ ವಿರುದ್ಧ ಏನಾದರೂ ಮಾಡೋದಿದ್ರೆ ಬೇಗ ಮಾಡಲಿ, ತಡವಾದರೆ ಬೇರೇನಾದರೂ ಸಂಭವಿಸೀತು ಅಂತ ಕುಮಾರಸ್ವಾಮಿ ಹೇಳಿದ್ದು ಉಪ ಮುಖ್ಯಮಂತ್ರಿಗೆ ಮತ್ತಷ್ಟು ವಿಪತ್ತು ಕಾದಿದೆ ಅಂತ ಎಚ್ಚರಿಕೆ ನೀಡಿದ ಹಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.