ಬೆಂಗಳೂರು, ಮೇ.02: ಇಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahulgandhi) ಅವರು ಭಾಗವಹಿಸಿದ್ದಾರೆ. ಸಮಾವೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ ಭಾಗವಹಿಸಿದ್ದು. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಪರವಾಗಿ ಪ್ರಚಾರ ಮಾಡಿದ್ದಾರೆ. ಸಮಾವೇಶದಲ್ಲಿ ಗೀತಾ ಅವರ ಪತಿ, ನಟ ಶಿವರಾಜ್ ಕುಮಾರ್ ಅವರು ಮಾತನಾಡಿದ್ದಾರೆ. ” ನನಗೆ ತುಂಬಾ ಸಂತೋಷವಾಗುತ್ತಿದೆ. ಇಂತಹ ಮಹಾನಾಯಕರ ಜತೆಗೆ ವೇದಿಕೆಯನ್ನು ಹಂಚಿಕೊಳ್ಳಲು, ನಾನು ಹಲವು ಸಮಾವೇಶದಲ್ಲಿ ಹೇಳಿದ್ದೇನೆ, ನಾನು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ, ಅವರ ಮನುಷ್ಯತ್ವಕ್ಕೆ ನಾನು ಅಭಿಮಾನಿ ಎಂದು ಹೇಳಿದರು. ಯಾವ ಮನುಷ್ಯ ಫಿಟ್ ಆಗಿರುತ್ತನೋ ಅವನು ದೇಶವನ್ನು ಸ್ಟ್ರೀಟ್ ಆಗಿ ಇಟ್ಟುಕೊಂಡಿರುತ್ತಾನೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Thu, 2 May 24