Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ ಬೆಂಗಳೂರಲ್ಲಿರುವ ಹೆಚ್ ಡಿ ರೇವಣ್ಣ ಮನೆಗೆ ಆಗಮಿಸಿದ್ದ ಭವಾನಿ ರೇವಣ್ಣ ಇಂದು ವಾಪಸ್ಸು ಹೋದರು!

ನಿನ್ನೆ ಬೆಂಗಳೂರಲ್ಲಿರುವ ಹೆಚ್ ಡಿ ರೇವಣ್ಣ ಮನೆಗೆ ಆಗಮಿಸಿದ್ದ ಭವಾನಿ ರೇವಣ್ಣ ಇಂದು ವಾಪಸ್ಸು ಹೋದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 02, 2024 | 3:07 PM

ಸಮಸ್ಯೆಯೇನೆಂದರೆ ಅವರು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೇರೆ ದಾರಿಯಾದರೂ ಯಾವುದಿದೆ? ಮೊದಲೆಲ್ಲ ತಾವಾಗಿಯೇ ಮಾಧ್ಯಮದವರ ಜೊತೆ ಮಾತಾಡಲು ಇಷ್ಟಪಡುತ್ತಿದ್ದರು. ಪರಿಸ್ಥಿತಿ ಈಗ ಬದಲಾಗಿದೆ. ಅವರ ಮಗ ಪ್ರಜ್ವಲ್ ರೇವಣ್ಣ, ಭಾರತದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ ಎನ್ನಲಾಗಿರುವ ಪ್ರಕರಣದಲ್ಲಿ ಆರೋಪಿಯೆನಿಸಿಕೊಂಡು ವಿದೇಶಕ್ಕೆ ಹೋಗಿದ್ದಾರೆ.

ಬೆಂಗಳೂರು: ನಗರದ ಬಸವನಗುಡಿ ಪ್ರದೇಶದಲ್ಲಿರುವ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಮನೆಗೆ ಬುಧವಾರದಂದು ಅಗಮಿಸಿದ್ದ ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಯಾರಿಗೂ ಕಾಣಿಸದ ಹಾಗೆ ಲಗುಬಗೆಯಿಂದ ಮನೆಯೊಳಗೆ ಹೋದ ದೃಶ್ಯಗಳ ವಿಡಿಯೋವನ್ನು ನಾವು ನಿಮಗೆ ತೋರಿಸಿದ್ದೆವು. ಇವತ್ತು ಅವರು ಅದೇ ಮನೆಯಿಂದ ಹೊರಬಿದ್ದು ಅವರು ಪ್ರಾಯಶಃ ಹಾಸನಕ್ಕೆ (Hassan) ವಾಪಸ್ಸು ಹೋದರು. ಇಂದು, ಅವರು ಮೊದಲು ಹೊರಗಿನಿಂದ ಬಂದು ಮನೆಯೊಳಗೆ ಹೋಗುತ್ತಾರೆ, ನಿನ್ನೆಯಂತೆ ಮುಚ್ಚುಮರೆಯಿಂದ ಪ್ರವೇಶಿಸದೆ ಕಾರಿಂದ ಇಳಿದು ನೇರವಾಗಿ ಒಳಗಡೆ ಹೋಗುತ್ತಾರೆ. ಆದರೆ, ಒಳಗಡೆ ಪ್ರವೇಶಿಸುವ ಮೊದಲು ಅವರು ತಮ್ಮ ಎಡಭಾಗಕ್ಕೊಮ್ಮೆ ತಿರುಗಿ ಮಾಧ್ಯಮದ ಕೆಮೆರಾಗಳಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಸಮಸ್ಯೆಯೇನೆಂದರೆ ಅವರು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೇರೆ ದಾರಿಯಾದರೂ ಯಾವುದಿದೆ? ಮೊದಲೆಲ್ಲ ತಾವಾಗಿಯೇ ಮಾಧ್ಯಮದವರ ಜೊತೆ ಮಾತಾಡಲು ಇಷ್ಟಪಡುತ್ತಿದ್ದರು. ಪರಿಸ್ಥಿತಿ ಈಗ ಬದಲಾಗಿದೆ. ಅವರ ಮಗ ಪ್ರಜ್ವಲ್ ರೇವಣ್ಣ, ಭಾರತದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ ಎನ್ನಲಾಗಿರುವ ಪ್ರಕರಣದಲ್ಲಿ ಆರೋಪಿಯೆನಿಸಿಕೊಂಡು ವಿದೇಶಕ್ಕೆ ಹೋಗಿದ್ದಾರೆ. ಭವಾನಿ ಅವರಿಗೆ ಮುಖ ಮುಚ್ಚಿಕೊಂಡು ತಿರುಗುವ ಸ್ಥಿತಿ ಉಂಟಾಗಿರುವುದು ದುರದೃಷ್ಟಕರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಾಜಿ ‌ಕಾರು ಚಾಲಕನ ಪತ್ನಿ ಮೇಲೆ ಭವಾನಿ ರೇವಣ್ಣ ಹಲ್ಲೆ ಆರೋಪ: ಹಾಸನದಲ್ಲಿ ಮಹಿಳೆಯರ ಪ್ರತಿಭಟನೆ