ಭಾರಿ ಅಪಾಯದಿಂದ 20ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್ ಮಿಸ್! ವಿಡಿಯೋ ನೋಡಿ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರು ಬಳಿ ಘಟನೆ ನಡೆದಿದೆ. ಆನೇಕಲ್ ಘಟಕಕ್ಕೆ ಸೇರಿದ KA 42-F - 519 ಕೆ.ಎಸ್.ಆರ್.ಟಿ.ಸಿ ಬಸ್ ಇದಾಗಿದೆ. ಆನೇಕಲ್ ಕಡೆಯಿಂದ ಸಮಂದೂರು ಮಾರ್ಗವಾಗಿ ಹೊರಟಿತ್ತು. ಈ ವೇಳೆ ಸಮಂದೂರು ಸಮೀಪ ಚಲಿಸುತ್ತಿರುವಾಗಲೇ ಏಕಾಏಕಿ ಬಸ್ ಟೈರ್ಗಳು ಕಳಚಿಕೊಂಡಿವೆ.
ಆನೇಕಲ್, ಮೇ 2: ಚಲಿಸುತ್ತಿದ್ದ ಬಸ್ನಿಂದ ಚಕ್ರಗಳು ಕಳಚಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಾರಿ ಅನಾಹುತ ತಪ್ಪಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರು ಬಳಿ ಘಟನೆ ನಡೆದಿದೆ. ಆನೇಕಲ್ (Anekal) ಘಟಕಕ್ಕೆ ಸೇರಿದ KA 42-F – 519 ಕೆ.ಎಸ್.ಆರ್.ಟಿ.ಸಿ ಬಸ್ (KSRTC BUS) ಇದಾಗಿದೆ. ಆನೇಕಲ್ ಕಡೆಯಿಂದ ಸಮಂದೂರು ಮಾರ್ಗವಾಗಿ ಹೊರಟಿತ್ತು. ಈ ವೇಳೆ ಸಮಂದೂರು ಸಮೀಪ ಚಲಿಸುತ್ತಿರುವಾಗಲೇ ಏಕಾಏಕಿ ಬಸ್ ಟೈರ್ಗಳು ಕಳಚಿಕೊಂಡಿವೆ. ಸುಮಾರು ಇಪ್ಪತ್ತಕ್ಕೂ ಅಧಿಕ ಜನರು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಇತ್ತ ಟೈರ್ಗಳು ಕಳಚುತ್ತಿದ್ದಂತೆ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಬಸ್ಗಳ ಕಂಡೀಷನ್ ಸರಿ ಇಲ್ಲದೆ ಇದ್ದರೂ ರೂಟ್ಗಳಿಗೆ ಅಧಿಕಾರಿಗಳು ಕಳಿಸುತ್ತಾರೆ. ಡಿಪೋ ಅಧಿಕಾರಿಗಳ ಬೇಜಾವಬ್ದಾರಿ, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕರ ಜೀವಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos