ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಎಸ್ಐಟಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು? ನಿವೃತ್ತ DYSP ಮೋಹನ್ ಹೇಳಿದ್ದೇನು?
ಎಸ್ಐಟಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ನಿವೃತ್ತ DYSP ಮೋಹನ್ ಅವರು ಮಾಹಿತಿ ನೀಡಿದ್ದಾರೆ. ಯಾವುದೇ ಸಮಯದಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಬಹುದು, ಎಸ್ಐಟಿ ಎಲ್ಲ ವಿಡಿಯೋಗಳನ್ನು ನೋಡಿ ಅದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬ ಬಗ್ಗೆ ಮೊದಲು ತನಿಖೆ ನಡೆಯಬೇಕು. ಈ ತನಿಖೆಯ ನಂತರ ಅವರಿಗೆ ನೋಟಿಸ್ ನೀಡುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು, ಮೇ.02: ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ತನಿಖೆ ಹೇಗೆ ನಡೆಯುತ್ತಿದೆ. ಎಸ್ಐಟಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ನಿವೃತ್ತ DYSP ಮೋಹನ್ ಅವರು ಮಾಹಿತಿ ನೀಡಿದ್ದಾರೆ. ಯಾವುದೇ ಸಮಯದಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಬಹುದು, ಎಸ್ಐಟಿ ಎಲ್ಲ ವಿಡಿಯೋಗಳನ್ನು ನೋಡಿ ಅದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬ ಬಗ್ಗೆ ಮೊದಲು ತನಿಖೆ ನಡೆಯಬೇಕು. ಈ ತನಿಖೆಯ ನಂತರ ಅವರಿಗೆ ನೋಟಿಸ್ ನೀಡುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋಗಳನ್ನು ತಾಂತ್ರಿಕ ಅಧ್ಯಯನ ಮಾಡಬೇಕು, ನಂತರ ಆರೋಪಿ ಹಾಗೂ ಸಾಕ್ಷ್ಯಗಳನ್ನು ತನಿಖೆ ಕರೆಯುತ್ತಾರೆ. ಅವರನ್ನು ತನಿಖೆ ನಡೆಸಿದ ನಂತರ ಒಂದು ವೇಳೆ ಆರೋಪ ಸಾಬೀತಾಗಿದ್ದಾರೆ. ಅವರನ್ನು ಅರೆಸ್ಟ್ ಮಾಡಬಹುದು ಅಥವಾ ಸ್ವಲ್ಪ ಸಮಯ ಕೇಳಬಹುದು ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ