ಮಾಜಿ ಕಾರು ಚಾಲಕನ ಪತ್ನಿ ಮೇಲೆ ಭವಾನಿ ರೇವಣ್ಣ ಹಲ್ಲೆ ಆರೋಪ: ಹಾಸನದಲ್ಲಿ ಮಹಿಳೆಯರ ಪ್ರತಿಭಟನೆ
ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮತ್ತು ಕಾರ್ತಿಕ್ ಪತ್ನಿ ಶಿಲ್ಪ ಮೇಲೆ ಭವಾನಿ ರೇವಣ್ಣ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಭವಾನಿ ರೇವಣ್ಣ ಅವರ ಹಲ್ಲೆಯಿಂದ ಕಾರ್ತಿಕ್ ಪತ್ನಿಗೆ ಗರ್ಭಪಾತವಾಗಿದೆ ಎಂದು ನಗರದ ಎನ್ಆರ್ ವೃತ್ತದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ಮಾಡಿದರು.
ಹಾಸನ, ಜನವರಿ 09: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮತ್ತು ಕಾರ್ತಿಕ್ ಪತ್ನಿ ಶಿಲ್ಪ ಮೇಲೆ ಭವಾನಿ ರೇವಣ್ಣ (Bhavani Revanna) ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಭವಾನಿ ರೇವಣ್ಣ ಅವರ ಹಲ್ಲೆಯಿಂದ ಕಾರ್ತಿಕ್ ಪತ್ನಿಗೆ ಗರ್ಭಪಾತವಾಗಿದೆ ಎಂದು ಆರೋಪಿಸಿ ನಗರದ ಎನ್ಆರ್ ವೃತ್ತದಲ್ಲಿ ಮಾಜಿ ಶಾಸಕ ಎಟಿ ರಾಮಸ್ವಾಮಿ ಮತ್ತು ನೂರಾರು ಮಹಿಳೆಯರು ಪ್ರತಿಭಟನೆ ಮಾಡಿದರು. 13 ಎಕರೆ ಭೂಮಿಗಾಗಿ ಕಾರ್ತಿಕ್ ಹಾಗು ಪತ್ನಿ ಶಿಲ್ಪಾ ಮೇಲೆ ಹಲ್ಲೆ ಹಾಗು ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಕಾರ್ತಿಕ್ ಅವರಿಗೆ ಸೇರಿದ 13 ಎಕರೆ ಭೂಮಿಯನ್ನು ತಮ್ಮ ಆಪ್ತರಿಗೆ ಬರೆದುಕೊಡಿ ಎಂದು 2023 ರ ಮಾರ್ಚ್ ತಿಂಗಳಲ್ಲಿ ಮನೆಯಲ್ಲಿ ಕೂಡಿಹಾಕಿ ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ನನ್ನ ಪತ್ನಿಗೆ ಗರ್ಭಪಾತವಾಗಿ ಎಂದು ಕಾರ್ತಿಕ್ ದೂರು ನೀಡಿದ್ದರು. ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಇಂದು (ಜ.09) ಪ್ರತಿಭಟನೆ ನಡೆಸಿದರು.