‘ಸಲಾರ್ ಪಾರ್ಟ್​ 2’ ಬಗ್ಗೆ ಪ್ರಶಾಂತ್ ನೀಲ್ ಏನ್ ಹೇಳಿದ್ದಾರೆ? ಗರುಡ ರಾಮ್ ವಿವರಿಸಿದ್ದು ಹೀಗೆ

| Updated By: ರಾಜೇಶ್ ದುಗ್ಗುಮನೆ

Updated on: Dec 22, 2023 | 3:32 PM

‘ಸಲಾರ್’ ಕೊನೆಯಲ್ಲಿ ದ್ವಿತೀಯ ಪಾರ್ಟ್ ಬರಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಸದ್ಯಕ್ಕೆ ಪ್ರಶಾಂತ್ ನೀಲ್ ಅವರು ಈ ಬಗ್ಗೆ ಆಲೋಚನೆ ಮಾಡಿಲ್ಲ. ಇದೇ ಮಾತನ್ನು ಗರುಡ ರಾಮ್ ಹೇಳಿದ್ದಾರೆ.

‘ಸಲಾರ್’ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಪ್ರಭಾಸ್ ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ‘ಸಲಾರ್’ ಕೊನೆಯಲ್ಲಿ ದ್ವಿತೀಯ ಪಾರ್ಟ್ ಬರಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಸದ್ಯಕ್ಕೆ ಪ್ರಶಾಂತ್ ನೀಲ್ (Prashanth Neel) ಅವರು ಈ ಬಗ್ಗೆ ಆಲೋಚನೆ ಮಾಡಿಲ್ಲ. ಇದೇ ಮಾತನ್ನು ಗರುಡ ರಾಮ್ ಹೇಳಿದ್ದಾರೆ. ‘ಪ್ರಶಾಂತ್ ನೀಲ್ ಅವರು ಎರಡನೇ ಪಾರ್ಟ್​ ಬಗ್ಗೆ ಏನನ್ನೂ ಹೇಳಿಲ್ಲ. ಅವರು ಶೂಟಿಂಗ್​ಗೆ ಕರೆದಾಗ ನಾನು ಹೋಗ್ತೀನಿ’ ಎಂದು ಅವರು ಹೇಳಿದ್ದಾರೆ. ‘ಸಲಾರ್’ ಸಿನಿಮಾ ನೋಡಿ ರಾಮ್ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on