Salaar Movie: ಹೇಗಿದೆ ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್ ‘ಸಲಾರ್’ ಚಿತ್ರದ ಮೊದಲಾರ್ಧ?
Salaar First Half Review: ‘ಸಲಾರ್’ ಸಿನಿಮಾ ಇಂದು ರಿಲೀಸ್ ಆಗಿದೆ. ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ಈ ನಿರೀಕ್ಷೆಯ ಕಥೆ ಏನಾಯಿತು? ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯಿತೇ? ಸಿನಿಮಾ ಮೊದಲಾರ್ಧದ ವಿಮರ್ಶೆ ಇಲ್ಲಿದೆ.
‘ಸಲಾರ್’ ಸಿನಿಮಾ (Salaar Movie) ಬಗ್ಗೆ ನಿರೀಕ್ಷೆ ಹುಟ್ಟಲು ಹಲವು ಕಾರಣಗಳು ಇವೆ. ಈ ಚಿತ್ರಕ್ಕೆ ಪ್ರಭಾಸ್ ಹೀರೋ. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಕೆಜಿಎಫ್’ ಅಂಥ ಸೂಪರ್ ಹಿಟ್ ಚಿತ್ರ ನೀಡಿದ ‘ಹೊಂಬಾಳೆ ಫಿಲ್ಮ್ಸ್’ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ದೊಡ್ಡ ಪಾತ್ರವರ್ಗ ಇದೆ. ‘ಸಲಾರ್’ ಸಿನಿಮಾ ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ಈ ನಿರೀಕ್ಷೆಯ ಕಥೆ ಏನಾಯಿತು? ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯಿತೇ? ಸಿನಿಮಾ ಮೊದಲಾರ್ಧದ ವಿಮರ್ಶೆ ಇಲ್ಲಿದೆ.
- ಆರಂಭದಲ್ಲಿ ಬಾಲ್ಯದ ಕಥೆಯನ್ನು ತೋರಿಸಲಾಗಿದೆ. ದೇವ ಹಾಗೂ ವರದರಾಜ್ ಸ್ನೇಹ ಅವರ ಗೆಳೆತನ ಹೈಲೈಟ್ ಆಗಿದೆ.
- ಪ್ರಭಾಸ್ ಅವರ ಎಂಟ್ರಿ ಮಾಸ್ ಆಗಿಲ್ಲ. ಆದರೆ, ಅಭಿಮಾನಿಗಳು ಯಾವ ರೀತಿಯಲ್ಲಿ ನಿರೀಕ್ಷಿಸಿದ್ದರೋ ಅದೇ ರೀತಿಯಲ್ಲಿ ಪ್ರಭಾಸ್ ಅವರ ಎಂಟ್ರಿ ಇದೆ.
- ಟ್ರೇಲರ್ನಲ್ಲಿ ಡಾರ್ಕ್ ಶೇಡ್ ಹೆಚ್ಚಿತ್ತು. ಸಿನಿಮಾದ ಮೊದಲಾರ್ಧ ಅದೇ ರೀತಿಯಲ್ಲಿ ಸಾಗಿದೆ. ಡಾರ್ಕ್ ಶೇಡ್ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ.
- ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ಎ ಪ್ರಮಾಣ ಪತ್ರ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾದಲ್ಲಿ ಭರ್ಜರಿ ವೈಲೆನ್ಸ್ ತೋರಿಸಲಾಗಿದೆ.
- ಪ್ರಶಾಂತ್ ನೀಲ್ ಅವರು ಆ್ಯಕ್ಷನ್ ಇರುವ ಪವರ್ಫುಲ್ ಸಿನಿಮಾ ಮಾಡಿದ್ದಾರೆ. ಮೊದಲಾರ್ಧದುದ್ದಕ್ಕೂ ಆ್ಯಕ್ಷನ್ ಹೈಲೈಟ್ ಆಗಿದೆ.
- ಪ್ರಭಾಸ್ ಅವರು ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಇಷ್ಟವಾಗುತ್ತದೆ.
- ರವಿ ಬಸ್ರೂರು ಅವರ ಬಿಜಿಎಂ ಕೇಳುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಒಂದು ಹಾಡು ಕೂಡ ಇಷ್ಟ ಆಗುತ್ತದೆ.
- ಪೃಥ್ವಿರಾಜ್ ಸುಕುಮಾರನ್ ಒಮ್ಮೆ ಮಾತ್ರ ಕಾಣುತ್ತಾರೆ. ಮೊದಲಾರ್ಧದಲ್ಲಿ ಬಾಲ್ಯದ ಕಥೆ ಹೈಲೈಟ್ ಆಗಿದೆ.
- ‘ಉಗ್ರಂ’ ಸಿನಿಮಾದ ರಿಮೇಕ್ ಅಲ್ಲ ಎಂದು ತಂಡ ಹೇಳಿತ್ತು. ಆದರೆ ಅದು ಸುಳ್ಳಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ