‘ಪ್ರಭಾಸ್ ಮಾಸ್ ಕಂಬ್ಯಾಕ್’; ‘ಸಲಾರ್’ ನೋಡಿ ಟ್ವಿಟರ್ನಲ್ಲಿ ವಿಮರ್ಶೆ ತಿಳಿಸಿದ ಫ್ಯಾನ್ಸ್
ಆ್ಯಕ್ಷನ್ ಪ್ರಿಯರಿಗೆ ಪ್ರಶಾಂತ್ ನೀಲ್ ಅವರು ಎಂದಿಗೂ ನಿರಾಸೆ ಮಾಡಿದವರಲ್ಲ. ‘ಸಲಾರ್’ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇಡಲಾಗಿದೆ. ಪ್ರಭಾಸ್ ಅವರು ಧೂಳೆಬ್ಬಿಸಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಥಿಯೇಟರ್ನಲ್ಲಿ ಸಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆ.
ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಸಿನಿಮಾ ಸುಳ್ಳು ಮಾಡಿಲ್ಲ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಪ್ರಭಾಸ್ ಅವರು ರಕ್ತದಲ್ಲಿ ಮಿಂದೆದ್ದಿದ್ದಾರೆ. ಪಕ್ಕಾ ಆ್ಯಕ್ಷನ್ ಸಿನಿಮಾ ಮೂಲಕ ದೊಡ್ಡ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸಿದ್ದಾರೆ.
ಆ್ಯಕ್ಷನ್ ಪ್ರಿಯರಿಗೆ ಪ್ರಶಾಂತ್ ನೀಲ್ ಅವರು ಎಂದಿಗೂ ನಿರಾಸೆ ಮಾಡಿದವರಲ್ಲ. ‘ಸಲಾರ್’ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇಡಲಾಗಿದೆ. ಪ್ರಭಾಸ್ ಅವರು ಧೂಳೆಬ್ಬಿಸಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಥಿಯೇಟರ್ನಲ್ಲಿ ಸಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆ. ‘ಸಲಾರ್’ ಸಿನಿಮಾನ ಎರಡು ಬಾರಿ ನೋಡಿದ್ದಾಗಿ ಕೆಲವರು ಹೇಳಿದ್ದಾರೆ. ‘ಬಾಹುಬಲಿ ಈಸ್ ಬ್ಯಾಕ್. ಕನ್ಫ್ಯೂಷನ್ ಬೇಡ, ಕೇವಲ ಗೂಸ್ಬಂಪ್ಸ್’ ಎಂದಿದ್ದಾರೆ ಪ್ರಭಾಸ್ ಅಭಿಮಾನಿಗಳು.
ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ. ಕನ್ನಡದ ‘ಉಗ್ರಂ’ ಸಿನಿಮಾದ ರಿಮೇಕ್ ಇದು ಎಂಬುದನ್ನು ತಂಡ ಈ ಮೊದಲು ಒಪ್ಪಿಕೊಂಡಿರಲಿಲ್ಲ. ಸಿನಿಮಾ ನೋಡಿದವರಿಗೆ ‘ಉಗ್ರಂ’ ಸಿನಿಮಾದ ಲೈನ್ ಕಾಣಿಸಿದೆ. ಇದು ಕೆಲವರಿಗೆ ಬೇಸರ ಮೂಡಿಸಿದೆ. ‘ಹೈ ಬಜೆಟ್ ಉಗ್ರಂ’ ಎಂದು ಅನೇಕರು ಟೀಕೆ ಮಾಡಿದ್ದಾರೆ.
Salaar watched 2 times. Mid-night 12:30 Am show & Early-Morning 5 Am show. My rating ⭐⭐⭐⭐/5
RebelStar screen pai kanipinche each scene goosebumps 💯🥵#SalaarReview #Salaar #Prabhas#RecordBreakingSalaar pic.twitter.com/gg0XoGDP1m
— Bengaluru Rebel ™ (@RebelTweetzz) December 22, 2023
Simple English…..no confusion 😂#Salaar #SalaarReview #DisasterSalaar pic.twitter.com/5CcLPKZjew
— d ₳₳ n k i 🪓 👑 (@SRK_ALLU_DHF) December 21, 2023
Worst Film of The Year. #Salaar
Worst Screen Play Ever Direction is bad too Black Scenes only
⭐✨ / 5 DISAPPOINTED #SalaarReview #SalaarCeaseFire #SalaarBookings #Prabhas pic.twitter.com/IwJWsXOur9
— filmi Indian (@filmiIndian12) December 22, 2023
ಇದನ್ನೂ ಓದಿ: ಸಿಂಹಾಸನಕ್ಕೆ ನಡೆಯುವ ಕಿತ್ತಾಟದಲ್ಲಿ ಆ್ಯಕ್ಷನ್ ವೈಭವ; ಹಳೆಯ ಕಥೆಗೆ ಹೊಸ ಮಸಾಲ
‘ಸಲಾರ್’ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಸಿನಿಮಾ ಉದ್ದಕ್ಕೂ ಪ್ರಭಾಸ್ ಅಬ್ಬರಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮೊದಲಾದವರ ಪಾತ್ರ ಹೈಲೈಟ್ ಆಗಿದೆ. ಕಾರ್ತಿಕ್ ಗೌಡ ಅವರ ಛಾಯಾಗ್ರಹಣ ಗಮನ ಸೆಳೆದಿದೆ. ರವಿ ಬಸ್ರೂರು ಸಂಗೀತ ಸಂಯೋಜನೆಯಲ್ಲಿ ಬದಲಾವಣೆ ಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ