Who would be CM? ನನ್ನ ಒಲವು ಯಾರ ಕಡೆಗೆ ಅಂತ ಮಾಧ್ಯಮಗಳಿಗೆ ಹೇಳಲಾಗದು: ಸತೀಶ್ ಜಾರಕಿಹೊಳಿ

|

Updated on: May 15, 2023 | 11:40 AM

ವೀಕ್ಷಕರ ಮುಂದೆ ಗೆದ್ದ ಅಭ್ಯರ್ಥಿಗಳು ತಮ್ಮ ಅಭಿಪ್ರಾಯಗಳ್ನು ತಿಳಿಸಿದ್ದಾರೆ ಎಂದ ಸತೀಶ್ ತಮ್ಮ ಒಲವು ಯಾರ ಕಡೆ ಅನ್ನೋದನ್ನು ಮಾತ್ರ ಬಹಿರಂಗಪಡಿಸಲಿಲ್ಲ.

ಬೆಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರೆನ್ನುವುದು ಕನಿಷ್ಟ ಇವತ್ತು ಸಾಯಂಕಾಲದವರೆಗೆ ಯಕ್ಷಪ್ರಶ್ನೆಯಾಗಿ ಉಳಿಯಲಿದೆ. ನಿನ್ನೆ ಸಾಯಂಕಾಲ ನಗರದ ಖಾಸಗಿ ಹೋಟೆಲೊಂದರಲ್ಲಿ ಸಿಎಲ್ ಪಿ ಮೀಟಿಂಗ್ (CLP meeting) ಬಳಿಕ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಚರ್ಚೆಯಾಗಿದೆ ಶಾಸಕರೆಲ್ಲ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ, ನಿರ್ಣಯ ಹೈಕಮಾಂಡ್ ಗೆ (high command) ಬಿಟ್ಟಿದ್ದು ಇವತ್ತು ಸಾಯಂಕಾಲದವರೆಗೆ ಎಲ್ಲ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ದೆಹಲಿಯಿಂದ ಆಗಮಿಸಿದ್ದ ವೀಕ್ಷಕರ ಮುಂದೆ ಗೆದ್ದ ಅಭ್ಯರ್ಥಿಗಳು ತಮ್ಮ ತಮ್ಮ ಅಭಿಪ್ರಾಯಗಳ್ನು ತಿಳಿಸಿದ್ದಾರೆ ಎಂದ ಸತೀಶ್ ತಮ್ಮ ಒಲವು ಯಾರ ಕಡೆ ಅನ್ನೋದನ್ನು ಬಹಿರಂಗಪಡಿಸಲಿಲ್ಲ. ಮಾಧ್ಯಮದವರ ಮುಂದೆ ಅದನ್ನು ಹೇಳಲಾಗದು ಅಂತ ಸತೀಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ