Karnataka New CM: ಶಾಸಕರ ಅಭಿಪ್ರಾಯಗಳನ್ನು ಹೈಕಮಾಂಡ್​ಗೆ ಬರೆದು ಕಳಿಸಿದ್ದೇವೆ, ನಿರ್ಣಯ ಅವರಿಗೆ ಬಿಟ್ಟಿದ್ದು: ಡಿಕೆ ಶಿವಕುಮಾರ್

Karnataka New CM: ಶಾಸಕರ ಅಭಿಪ್ರಾಯಗಳನ್ನು ಹೈಕಮಾಂಡ್​ಗೆ ಬರೆದು ಕಳಿಸಿದ್ದೇವೆ, ನಿರ್ಣಯ ಅವರಿಗೆ ಬಿಟ್ಟಿದ್ದು: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:May 15, 2023 | 11:16 AM

ಶಿವಕುಮಾರ್ ಅವರನ್ನು ಸಿಎಲ್​ಪಿಯಲ್ಲಿ ತೆಗೆದುಕೊಂಡ ನಿರ್ಣಯಗಳ ಕುರಿತು ಪ್ರಶ್ನಿಸಿದಾಗ, ಚುಟುಕಾಗಿ ಒನ್ ಲೈನ್ ರೆಸ್ಯೂಲಷನ್ ಅನ್ನು ಸಭೆಯಲ್ಲಿ ಅಂಗೀಕರಿಸಿದ್ದಾಗಿ ಹೇಳಿದರು.

ಬೆಂಗಳೂರು: ನಿನ್ನೆ ನಗರದ ಖಾಸಗಿ ಸಭೆಯೊಂದರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (CLP meeting) ನಡೆಯಿತು. ಪಕ್ಷದಿಂದ ಆಯ್ಕೆಯಾದವರೆಲ್ಲರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಏನು ನಡೆಯಿತು ಅನ್ನೋದು ಹೊರಗಿನವರಿಗೆ ಗೊತ್ತಾಗಲಿಲ್ಲ. ಮಾಧ್ಯಮ ಪ್ರತಿನಿಧಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಿಎಲ್ಪಿಯಲ್ಲಿ ತೆಗೆದುಕೊಂಡ ನಿರ್ಣಯಗಳ ಕುರಿತು ಪ್ರಶ್ನಿಸಿದಾಗ, ಅವರು ಚುಟುಕಾಗಿ ಒನ್ ಲೈನ್ ರೆಸ್ಯೂಲಷನ್ ಅನ್ನು (One Line Resolution) ಸಭೆಯಲ್ಲಿ ಅಂಗೀಕರಿಸಿದ್ದಾಗಿ ಹೇಳಿದರು. ಮುಖ್ಯಮಂತ್ರಿ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಅವರು, ಶಾಸಕರ ಅಭಿಪ್ರಾಯಗಳನ್ನು ಹೈಕಮಾಂಡ್ ಗೆ ಕಳಿಸಲಾಗಿದೆ, ಅವರು ನಿರ್ಣಯ ತೆಗೆದುಕೊಳ್ಳುತ್ತಾರೆ ಅಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 15, 2023 10:15 AM