ಯಾವ ಬಣಕ್ಕೂ ನಾನು ಸೇರಿದವನಲ್ಲ, ವಕ್ಫ್​ ವಿರುದ್ಧ ಹೋರಾಟವೊಂದೇ ಬಿಜೆಪಿಯ ಗುರಿ: ಬೊಮ್ಮಾಯಿ

|

Updated on: Dec 06, 2024 | 7:40 PM

ಶಿಗ್ಗಾವಿ ಅಸೆಂಬ್ಲಿ ಚುನಾವಣೆ ಬಗ್ಗೆ ಪ್ರಶ್ನೆ ಕೇಳಿದಾಗ ಬಸವರಾಜ ಬೊಮ್ಮಾಯಿ ಸಿಡಿಮಿಡಿಗೊಂಡು ಬೇರೆ ಪ್ರಶ್ನೆ ಕೇಳಿ ಎಂದರು. ಶಾಸಕರ ಕಚೇರಿಯನ್ನು ಹಸ್ತಾಂತರ ಮಾಡುವ ಪ್ರಶ್ನೆಗೆ ಉತ್ತರಿಸಿದ ಅವರು, ಗೆದ್ದಿರುವ ಶಾಸಕ ಅಹವಾಲನ್ನು ತಮ್ಮಲ್ಲಿಗೆ ತೆಗೆದುಕೊಂಡು ಬಂದರೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು

ಹಾವೇರಿ: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಸಂಸದ ಬಸವರಾಜ ಬೊಮ್ಮಾಯಿ ತಾನು ಯಾವ ಬಣಕ್ಕೂ ಸೇರಿದವನಲ್ಲ, ತಮ್ಮ ಪಕ್ಷದಲ್ಲಿ ಬಣಗಳ ಪ್ರಶ್ನೆಯೇ ಉದ್ಭವಿಸಲ್ಲ, ಎಲ್ಲ ನಾಯಕರ, ಮುಖಂಡರ ಮತ್ತು ಕಾರ್ಯಕರ್ತರ ಮುಂದೆ ಇರೋದು ವಕ್ಫ್ ಭೂಕಬಳಿಕೆ ವಿಚಾರ, ಅದು ರೈತರ ಜಮೀನು, ಮಠಮಾನ್ಯಗಳ ಆಸ್ತಿ, ಕೆರೆ, ಶಾಲಾ ಕಾಲೇಜುಗಳಿಗೆ ಸೇರಿದ ಜಮೀನನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ, ಅದನ್ನು ತಡೆಯುವುದೊಂದೇ ತಮ್ಮ ಗುರಿಯಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾನೂನು ಪ್ರಕಾರ ಇದ್ದರೆ ಭಯವೇಕೆ?: ಸಿಎಂ “ತೆರಿಗೆ ಭಯೋತ್ಪಾದನೆ” ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು