‘ಸೊಸೆಗೆ ಸರ್ಕಾರ ಖಾಯಂ ನೌಕರಿ ನೀಡಲಿ’: ರೇಣುಕಾಸ್ವಾಮಿ ತಂದೆ ಮನವಿ
ಡಿ ಗ್ಯಾಂಗ್ನಿಂದ ಹತ್ಯೆಗೆ ಒಳಗಾದ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ರಂಭಾಪುರಿಶ್ರೀ ಪೂಜೆ ನೆರವೇರಿಸಿದ್ದಾರೆ. ಆತ್ಮ ಶಾಂತಿ, ವಾಸ್ತು ಶಾಂತಿಗಾಗಿ ಪೂಜೆ ಮಾಡಲಾಗಿದೆ. ಈ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಶ್ರೀಗಳ ಆಶೀರ್ವಾದದಿಂದ ಒಳಿತಾಗುವ ನಂಬಿಕೆಯಿದೆ. ಸೊಸೆಗೆ ಸರ್ಕಾರದಿಂದ ಖಾಯಂ ನೌಕರಿ ನೀಡಲಿ’ ಎಂದು ಕಾಶೀನಾಥಯ್ಯ ಮನವಿ ಮಾಡಿದ್ದಾರೆ.
ಚಿತ್ರದುರ್ಗದ ರೇಣಕಾಸ್ವಾಮಿ ಮನೆಯಲ್ಲಿ ರಂಭಾಪುರಿಶ್ರೀ ಪೂಜೆ ನೆರವೇರಿಸಿದ್ದಾರೆ. ಆತ್ಮಶಾಂತಿ, ವಾಸ್ತುಶಾಂತಿಗಾಗಿ ಪೂಜೆ ಮಾಡಲಾಗಿದೆ. ಈ ಬಗ್ಗೆ ರೇಣುಕಾಸ್ವಾಮಿ ಅವರ ತಂದೆ ಕಾಶೀನಾಥಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಈ ವೇಳೆ ಸೊಸೆ ಮತ್ತು ಮೊಮ್ಮಗ ಮನೆಯಲ್ಲಿ ಇರಬೇಕಿತ್ತು. ಅವರು ತವರೂರಲ್ಲಿದ್ದಾರೆ. ರಂಭಾಪುರಿಶ್ರೀಗಳು ಮೊನ್ನೆಯೇ ಬಂದು ವಾಸ್ತವ್ಯವಿದ್ದು ಬೆಳಗ್ಗೆ ಪೂಜೆ ಮಾಡಿದ್ದಾರೆ. ಶ್ರೀಗಳ ಪೂಜೆ, ಆಶೀರ್ವಾದದಿಂದ ಒಳಿತಾಗುವ ನಂಬಿಕೆಯಿದೆ. ಸೊಸೆಗೆ ಸರ್ಕಾರದಿಂದ ಖಾಯಂ ನೌಕರಿ ನೀಡಲಿ’ ಎಂದು ಕಾಶೀನಾಥಯ್ಯ ಮನವಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos