Karnataka Assembly Polls; ಕುಮಾರಸ್ವಾಮಿಯವರಂತೆ ಅಳುವ, ಡ್ರಾಮಾ ಮಾಡುವ ಅಗತ್ಯ ನನಗಿಲ್ಲ: ಜಿ ಪರಮೇಶ್ವರ
ಕಲ್ಲೇಟು ತಿಂದು ನೋವು ಅನುಭವಿಸುತ್ತಿರುವವನು ನಾನು. ನನಗೆ ಡ್ರಾಮಾ ಮಾಡುವ ಅವಶ್ಯಕತೆಯಿಲ್ಲ,’ ಎಂದು ಹೇಳಿದರು.
ತುಮಕೂರು: ನಿನ್ನೆ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಕಲ್ಲೇಟು ತಿಂದು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಇಂದು ಡಿಸ್ಚಾರ್ಜ್ ಅಗಿ ಮನೆಗೆ ವಾಪಸ್ಸಾಗಿರುವ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ (G Parameshwara) ತಲೆಗೆ ಬ್ಯಾಂಡೇಜ್ ಸುತ್ತಿದ ಸ್ಥಿತಿಯಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ ತಮ್ಮ ಗಾಯದ ಬಗ್ಗೆ ವಿವರಣೆ ನೀಡಿದರು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy ), ಗಾಯವೇನೂ ಇಲ್ಲ, ಮತದಾರರ ಸಹಾನುಭೂತಿ (sympathy) ಗಿಟ್ಟಿಸಲು ಡ್ರಾಮಾ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಅಂತ ಪತ್ರಕರ್ತರೊಬ್ಬರು ಅವರ ಗಮನಕ್ಕೆ ತಂದಾಗ, ‘ಡ್ರಾಮಾ ಮಾಡೋದು ಜನರ ಮುಂದೆ ಅಳೋದು ಅವರಿಗೆ ಅಭ್ಯಾಸವಿರಬಹುದು, ಕಲ್ಲೇಟು ತಿಂದು ನೋವು ಅನುಭವಿಸುತ್ತಿರುವವನು ನಾನು. ನನಗೆ ಡ್ರಾಮಾ ಮಾಡುವ ಅವಶ್ಯಕತೆಯಿಲ್ಲ,’ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ