ಕೋಲಾರದಲ್ಲಿ ಪ್ರಧಾನಿ ಮೋದಿಗೆ ಕಂಬಳಿ ಹೊದಿಸಿ ವಿಶೇಷ ಉಡುಗೊರೆ ನೀಡಿ ಸನ್ಮಾನ

ಕೋಲಾರದಲ್ಲಿ ಪ್ರಧಾನಿ ಮೋದಿಗೆ ಕಂಬಳಿ ಹೊದಿಸಿ ವಿಶೇಷ ಉಡುಗೊರೆ ನೀಡಿ ಸನ್ಮಾನ

ರಮೇಶ್ ಬಿ. ಜವಳಗೇರಾ
|

Updated on: Apr 30, 2023 | 12:36 PM

ಕೋಲಾರ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್​ ಮೋದಿ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಿದರು. ಅಲ್ಲದೇ ಕೇಸರಿ ಪೇಟ ತೊಡಸಿ ಬುದ್ಧನ ವಿಗ್ರಹವನ್ನು ಉಡುಗೊರೆ ನೀಡಿದರು.

ಕರುನಾಡ ಕುರುಕ್ಷೇತ್ರಕ್ಕೆ ರಗಡ್ ಎಂಟ್ರಿ ಕೊಟ್ಟಿರೋ ಪ್ರಧಾನಿ ನರೇಂದ್ರ ಮೋದಿ ಮೊದಲ ದಿನವೇ ಮತಭೂಮಿಯಲ್ಲಿ ರಣಕಹಳೆ ಮೊಳಗಿಸಿದ್ದಾರೆ. ಇಷ್ಟು ದಿನ ಒಂದ್ ಲೆಕ್ಕ ಇನ್ಮುಂದೆ ಒಂದ್ ಲೆಕ್ಕ ಎನ್ನುವಂತೆ, ಬೀದರ್, ವಿಜಯಪುರ, ಬೆಳಗಾವಿ, ಬೆಂಗಳೂರು ಹೀಗೆ ಒಂದೇ ದಿನ ಉತ್ತರದಿಂದ ದಕ್ಷಿಣದವರೆಗೂ ಸಂಚರಿಸಿ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಚಾಟಿ ಬೀಸುತ್ತಲೇ ಘೋಷಣೆಗಳ ಬಾಣ ಬಿಟ್ಟಿದ್ದಾರೆ. ಎರಡನೇ ದಿನವಾದ ಇಂದು(ಏಪ್ರಿಲ್ 30) ಕೋಲಾರಿಂದ ಮೋದಿ ಪ್ರಚಾರ ಆರಂಭಿಸಿದ್ದು, ಕೋಲಾರದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ನಾಯಕರು ಅದ್ಧೂರಿ ಸ್ವಾಗತ ಕೋರಿದರು. ಇನ್ನು ಇದೇ ವೇಳೆ ಕೋಲಾರ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್​ ಮೋದಿ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಿದರು. ಅಲ್ಲದೇ ಕೇಸರಿ ಪೇಟ ತೊಡಸಿ ಬುದ್ಧನ ವಿಗ್ರಹವನ್ನು ಉಡುಗೊರೆ ನೀಡಿದರು.