Karnataka Assembly Polls; ಬೆತ್ತಲೆ ಜಗತ್ತು ಬರೆದಿರುವ ಪ್ರತಾಪ್ ಸಿಂಹ ಬೆತ್ತಲೆಯಾಗುವ ದಿನ ದೂರವಿಲ್ಲ: ಹೆಚ್ ವಿಶ್ವನಾಥ್

Karnataka Assembly Polls; ಬೆತ್ತಲೆ ಜಗತ್ತು ಬರೆದಿರುವ ಪ್ರತಾಪ್ ಸಿಂಹ ಬೆತ್ತಲೆಯಾಗುವ ದಿನ ದೂರವಿಲ್ಲ: ಹೆಚ್ ವಿಶ್ವನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 29, 2023 | 6:37 PM

ನಿನ್ನೆ ಮಾಧ್ಯಮ ಗೋಷ್ಟಿಯಲ್ಲಿ ಸಂಸದರು ಸಿದ್ದರಾಮಯ್ಯರನ್ನು ಟೀಕಿಸಿದ್ದು ವಿಶ್ವನಾಥ್​ರಿಗೆ ಕೋಪತರಿಸಿದೆ.

ಮೈಸೂರು: ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಅವರು ಸಂಸದ ಪ್ರತಾಪ್ ಸಿಂಹರನ್ನು (Pratap Simha) ತೀವ್ರ ತರಾಟೆಗೆ ತೆಗದುಕೊಂಡರು. ನಿನ್ನೆ ಮಾಧ್ಯಮ ಗೋಷ್ಟಿಯಲ್ಲಿ ಸಂಸದರು ಸಿದ್ದರಾಮಯ್ಯರನ್ನು (Siddaramaiah) ಟೀಕಿಸಿದ್ದು ವಿಶ್ವನಾಥ್ ರಿಗೆ ಕೋಪತರಿಸಿದೆ. ಸಿದ್ದರಾಮಯ್ಯ ಮತ್ತು ವಿ ಸೋಮಣ್ಣ ಬೇರು ಮಟ್ಟದಿಂದ ರಾಜಕೀಯದಲ್ಲಿ ಬೆಳೆದವರು. ಅವರ ನಡುವೆ ಹೋಗಲು ಇವನಾರು, ಮಾಧ್ಯಮದವರ ಮುಂದೆ ಅವನು ಬೊಗಳೆ ಬಿಡೋದು ನಿಲ್ಲಿಸಲಿ ಅಂತ ಏಕವಚನದಲ್ಲಿ ಕೆಂಡಕಾರಿದ್ದಾರೆ. ‘ನೀನು ಪತ್ರಿಕೆಯಲ್ಲಿ ಬೆತ್ತಲು ಜಗತ್ತು ಬರೆದಿರಬಹುದು, ಅದರೆ ನಾನು ನಿನ್ನನ್ನು ಬೆತ್ತಲೆ ಮಾಡುವ ದಿನ ದೂರವಿಲ್ಲ, ಸುಳ್ಳು ಹೇಳಿ ಸೈಟ್ ಗಿಟ್ಟಿಸಿದ ಗಿರಾಕಿ ನೀನು, ಥೂ ನಿನ್ ಯೋಗ್ಯತೆಗಿಷ್ಟ್ಟು ಬೆಂಕಿ ಹಾಕ,’ ಅಂತ ವಿಶ್ವನಾಥ ಸಿಡುಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 29, 2023 05:57 PM