Karnataka Assembly Polls: ಸೋನಿಯಾಗಾಂಧಿ ವಿಷಕನ್ಯೆ ಅಂತ ತಾವು ಹೇಳಿದ್ದನ್ನು ಸಮರ್ಥಿಸಿಕೊಂಡ ಬಸನಗೌಡ ಪಾಟೀಲ್ ಯತ್ನಾಳ್
ರಾಜ್ಯಕ್ಕೆ ಬಂದಾಗೆಲ್ಲ ಪ್ರಧಾನಿ ಮೋದಿಯವರು ಕನ್ನಡದಲ್ಲಿ ಭಾಷಣ ಆರಂಭಿಸಿದರೆ ಯತ್ನಾಳ್ ತಮ್ಮ ಭಾಷಣದ ಹೆಚ್ಚಿನ ಭಾಗವನ್ನು ಹಿಂದಿ ಭಾಷೆಯಲ್ಲಿ ಮಾಡಿದ್ದು ಆಶ್ಚರ್ಯ ಹುಟ್ಟಿಸಿತು.
ವಿಜಯಪುರ: ನಿನ್ನೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು (Sonia Gandhi) ವಿಷಕನ್ಯೆ ಎಂದು ಕರೆದು ವಿವಾದಕ್ಕೀಡಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ವಿಜಯಪುರ ಕಾರ್ಯಕ್ರಮದಲ್ಲಿ ಮಾತಾಡುವಾಗ ತಾವು ಬಳಸಿದ ಶಬ್ದವನ್ನು ಸಮರ್ಥಿಸಿಕೊಂಡರು. ವಿಶ್ವದ ಶ್ರೇಷ್ಠ ನಾಯಕನೆಂದು ಗುರುತಿಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಯಾರೇ ಅವಹೇಳನಕಾರಿ ಪದಗಳನ್ನು ಬಳಸಿದರೆ ನಾವು ಸಹಿಸಿಕೊಳ್ಳುವುದಿಲ್ಲ, ಅವರು ಬಳಸಿದ ಭಾಷೆಯಲ್ಲೇ ಉತ್ತರ ನೀಡುತ್ತೇವೆ ಎಂದು ಯತ್ನಾಳ್ ಹೇಳಿದರು. ರಾಜ್ಯಕ್ಕೆ ಬಂದಾಗೆಲ್ಲ ಪ್ರಧಾನಿ ಮೋದಿಯವರು ಕನ್ನಡದಲ್ಲಿ ಭಾಷಣ ಆರಂಭಿಸಿದರೆ ಯತ್ನಾಳ್ ತಮ್ಮ ಭಾಷಣದ ಹೆಚ್ಚಿನ ಭಾಗವನ್ನು ಹಿಂದಿ ಭಾಷೆಯಲ್ಲಿ ಮಾಡಿದ್ದು ಆಶ್ಚರ್ಯ ಹುಟ್ಟಿಸಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos